ಭಾರತ ಯಾವಾಗ ಮುಗಿ ಬೀಳುತ್ತದೆಯೋ ಎಂಬ ಭಯದಲ್ಲಿ ಪಾಕಿಸ್ತಾನ ಇದೆ. ಈ ಹಿನ್ನೆಲೆಯಲ್ಲಿ ತನ್ನ ನಾಗರಿಕರಿಗೆ ಆಹಾರ ಪದಾರ್ಥ ಸಂಗ್ರಹಿಸುವಂತೆ ಪಾಕ್ ಹೇಳಿದೆ.
ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಆತಂಕ ಇದೆ. ಆಹಾರ ವಸ್ತು ಸಂಗ್ರಹಿಟ್ಟುಕೊಳ್ಳುವಂತೆ ಪಾಕಿಸ್ತಾನ ಗಡಿ ಭಾಗದ ಜನತೆಗೆ ಸೂಚನೆ ನೀಡಲಾಗಿದೆ. ನೀಲಂ ಕಣಿವೆಗೆ ತೆರಳದಂತೆ ಪ್ರವಾಸಿಗರಿಗೆ ನಿರ್ದೇಶನ ಕೊಡಲಾಗಿದೆ. ಕರಾಚಿ, ಲಾಹೋರ್ ವಾಯುನೆಲೆಗಳು ದಿನದ 8 ತಾಸು ಬಂದ್ ಆಗಲಿವೆ.
ಪಾಕಿಸ್ತಾನ ಮತ್ತು ಭಾರತದ ನಡುವೆ ಪಹಲ್ಗಾಮ್ ದಾಳಿಯ ನಂತರ ಉದ್ವಿಗ್ನತೆ ಹೆಚ್ಚಾಗಿದೆ. ಪಾಕಿಸ್ತಾನದ ಪ್ರಧಾನಿ ಈ ದಾಳಿಯ ಬಗ್ಗೆ ಪಾರದರ್ಶನಕ ತನಿಖೆಗೆ ಸಿದ್ಧ ಎಂದು ಹೇಳಿಕೆ ನೀಡಿದ್ದರು. ಭಯದಲ್ಲೇ ಪಾಕ್ ಹಲವಾರು ಹೇಳಿಕೆಗಳನ್ನು ನೀಡುತ್ತಿದೆ. ಆದರೂ ತನ್ನ ಕಪಟತನ ಮಾತ್ರ ಬಿಡುತ್ತಿಲ್ಲ.



















