ಉಗ್ರವಾದ… ಜಗತ್ತನ್ನೇ ತನ್ನ ಕಪಿಮುಷ್ಠಿಯಿಲ್ಲಿ ಇಟ್ಟುಕೊಳ್ಳಬೇಕೆಂಬ ಅಮೆರಿಕದ ದುರಾಸೆಯ ಪಾಪದ ಕೂಸು. ಭಾರತದಿಂದ ಬೇರ್ಪಟ್ಟ ಪಾಕ್ ಗೆ ಆರ್ಥಿಕ ಬಲ ನೀಡಿ ಈ ನೆಲದಲ್ಲಿ ಉಗ್ರವಾದವನ್ನು ಸಾಕಿ ಸಲುಹಿದ್ದೇ ಪಾಕಿಸ್ತಾನ. ಅಷ್ಟೇ ಯಾಕೆ ತಾಲಿಬಾನಿಗಳನ್ನು ಎತ್ತಿಕಟ್ಟಿ, ವಿಶ್ವದ ಶಾಂತಿ ಕದಡುವ ಕೆಲಸಕ್ಕೆ ಕೈ ಹಾಕಿ ಕಡೆಗೆ ತನ್ನದೇ ನೆಲದಲ್ಲಿ ಉಗ್ರ ಲಾಡೆನ್ ರಕ್ತದೋಕುಳಿ ನಡೆಸಿದ್ದೀಗ ಇತಿಹಾಸ.
ಆದರೆ ಇದೇ ಮೊದಲ ಬಾರಿ ಎನ್ನುವಂತೆ ಖುದ್ದು ಪಾಕ್ ನ ರಕ್ಷಣಾ ಸಚಿವ ಖ್ವಾಜ ಆಸೀಫ್ ಪಾಕ್ ಉಗ್ರವಾದವನ್ನು ಸಲುಹುತ್ತಿದೆ ಅಂತಾ ಒಪ್ಪಿಕೊಂಡಿದ್ದಾರೆ. ಇದಕ್ಕೆ ಸಾಕ್ಷಿ ಎನ್ನುವಂತೆ ಪಾಕ್ ನ ಮಾಜಿ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಕೂಡಾ ಅಮೆರಿಕಾ ಮತ್ತು ಕೆಲ ಪಾಶ್ಚಿಮಾತ್ಯ ದೇಶಗಳ ಕೈಗೊಂಬೆಗಳಾಗಿ ಪಾಕ್ ವರ್ತಿಸಿದೆ. ಉಗ್ರವಾದಕ್ಕೂ ಪಾಕಿಗೂ ಅವಿನಾಭಾವ ಇತಿಹಾಸವಿದೆ ಅಂತಾ ಭುಟ್ಟೋ ಸ್ಪಷ್ಟಪಡಿಸಿದ್ದಾರೆ. ಇದರ ಕರಾಳ ಫಲವನ್ನೇ ಇಂದು ಅನುಭವಿಸುತ್ತಿದೆ ಎಂದಿದ್ದಾರೆ.
ಯುದ್ಧ ಸಾರಲು ಇಷ್ಟು ಸಾಕ್ಷ್ಯ ಸಾಕಾ
ಖುದ್ದು ಪಾಕ್ ರಕ್ಷಣಾ ಸಚಿವರೇ ತಾವು ಉಗ್ರವಾದಕ್ಕೆ ನೀರೆರೆಯುತ್ತಿದ್ದೇವೆ ಎಂದಿದ್ದಾರೆ. ಹಾಗಿದ್ದರೆ ಇದೊಂದು ಸಾಕ್ಷ್ಯ ಸಾಕಾ ಭಾರತ ಸಮರ ಸಾರಲು ಎನ್ನುವ ಪ್ರಶ್ನೆ ಮೂಡುತ್ತಿದೆ. ಇನ್ನೊಂದೆಡೆ, ಭಾರತ ತನ್ನ ಸಂಪೂರ್ಣ ಸೇನಾ ಶಕ್ತಿಯನ್ನು ಹೈಅಲರ್ಟ್ನಲ್ಲಿಟ್ಟಿರುವುದು ನಿನ್ನೆಯ ವಾಯುಸೇನೆ ತಾಲೀಮು ಸಾಬೀತು ಮಾಡಿದೆ. ಇದರ ನಡುವೆ, ಪಾಕ್ ಗೆ ಹರಿದು ಬರ್ತಿರೋ ಜಾಗತಿಕ ನಿಧಿ ಹರಿವನ್ನು ನಿಲ್ಲಿಸಲು ಭಾರತ ರಣತಂತ್ರ ರೂಪಿಸಿದೆ. ವಿಶ್ವ ಬ್ಯಾಂಕ್ ಸೇರಿದಂತೆ, ಎಲ್ಲ ಆರ್ಥಿಕ ಮೂಲಗಳಿಗೂ ಮೂಗುದಾರಕ್ಕೆ ತಂತ್ರ ಹೆಣೆದಿದೆ. ಇತ್ತ ಪಾಕ್ ಭಾರತದ ಛಡಿಯೇಟಿನಿಂದ ಪಾರುಮಾಡುವಂತೆ ಅಮಿರಿಕಾ,ಸೌದಿ ಮತ್ತು ಯುಎಇ ಆಡಳಿತಗಳ ಮೊರೆ ಹೋಗುತ್ತಿದೆ.
2 ತಿಂಗಳಿಗಾಗುವಷ್ಟು ಆಹಾರ ಸಂಗ್ರಹಿಸಿ
ಭಾರತದ ಸಂಭಾವ್ಯ ದಾಳಿ ಭೀತಿಯಲ್ಲೇ ಪಾಕ್ ದಿನ ದೂಡುತ್ತಿದೆ. ಇದರ ನಡುವೆ ಪಾಕ್ ಆಕ್ರಮಿತ ಕಾಶ್ಮೀರದ ಪ್ರಧಾನಿ ಚೌದರಿ ಅನ್ವರ್ ಉಲ್ ಹಕ್, ತನ್ನ ಜನಗಳಿಗೆ 2 ತಿಂಗಳಿಗಾಗುವಷ್ಟು ಆಹಾರ ದಾಸ್ತಾನಿಗೆ ಸೂಚಿಸಿದ್ದಾರೆ. ಪಿಓಕೆಯಲ್ಲಿ ದಿಢೀರ್ ರಸ್ತೆಗಳ ದುರಸ್ಥಿ ಕಾರ್ಯ ಆರಂಭವಾಗಿದ್ದು, ಮುಂದಿನ 10 ದಿನಗಳ ಮಟ್ಟಿಗೆ 1 ಸಾವಿರ ಮದರಸಾಗಳಿಗೆ ರಜೆ ಘೋಷಿಸಲಾಗಿದೆ. ಇನ್ನೊಂದೆಡೆ,ಪಹಲ್ಗಾಮ್ ದಾಳಿ ನಡೆಸಿದ ಮೂಸಾನ ತಂಡ ಬೈಸರನ್ ನ ಅರಣ್ಯದ ಗುಹೆಗಳಲ್ಲಿ ಅಡಗಿರುವ ಶಂಕೆಯಿದ್ದು, ಸತತ 10ನೇ ದಿನವೂ ಭಾರತೀಯ ಸೇನೆಯ ಆಪರೇಷನ್ ಆಕ್ರಮಣ್ ಮುಂದುವರಿದಿದೆ.



















