ಭಾರತ ಹಾಗೂ ಪಾಕಿಸ್ತಾನದ ಮಧ್ಯೆ ಯುದ್ಧದ ವಾತಾವರಣ ಸೃಷ್ಟಿಯಾಗಿದೆ. ಆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕಟ್ಟೆಚ್ಚರ ವಹಿಸುವಂತೆ ಗುಪ್ತಚರ ವಿಭಾಗ ಸೂಚನೆ ನೀಡಿದೆ.
ರಾಜ್ಯದ ಮೆಟ್ರೋ, ರೈಲು, ಬಸ್ ನಿಲ್ದಾಣಗಳಲ್ಲೂ ನಿಗಾ ವಹಿಸುವಂತೆ ಸೂಚಿಸಲಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳ ಸೂಕ್ಷ್ಮ ಪ್ರದೇಶಗಳ ಮೇಲೆ ತೀವ್ರ ನಿಗಾ ವಹಿಸಬೇಕು ಜೊತೆಗೆ ಸೂಕ್ತ ಬಂದೋಬಸ್ತ್ ಕೈಗೊಳ್ಳಬೇಕೆಂದು ರಾಜ್ಯ ಗುಪ್ತಚರ ವಿಭಾಗದ ನಿರ್ದೇಶಕ ಹೇಮಂತ್ ಎಂ. ನಿಂಬಾಳ್ಳರ್ ಸೂಚನೆ ನೀಡಿದ್ದಾರೆ.

ನಿಗಾ ಇಡಬೇಕಾದ ಸ್ಥಳಗಳು
ಆಡಳಿತ ಕಟ್ಟಡಗಳು, ರಕ್ಷಣಾ ಸ್ಥಾವರಗಳು, ವಿಜ್ಞಾನ ಸಂಶೋಧನಾ ಕೇಂದ್ರಗಳು, ವಿಮಾನ ನಿಲ್ದಾಣಗಳು, ಜಲಾಶಯಗಳು, ಉಪಗ್ರಹ ಕೇಂದ್ರಗಳು, ಜಲ ವಿದ್ಯುತ್ ಸ್ಥಾವರಗಳು, ಅಣು ವಿದ್ಯುತ್ ಸ್ಥಾವರ, ರೈಲು ನಿಲ್ದಾಣಗಳು, ಮೆಟ್ರೊ ನಿಲ್ದಾಣ, ಬಸ್ ನಿಲ್ದಾಣ, ಬಂದರು ಹಾಗೂ ಹಡಗು ತಯಾರಿಕಾ ಸಂಸ್ಥೆಗಳು, ಸಾಫ್ಟ್ವೇರ್ ಕಂಪನಿಗಳು, ,ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಕೇಂದ್ರಗಳು, ಪೈಪ್ಲೈನ್ ಮತ್ತು ಸಂಗ್ರಹಗಾರಗಳು, ಜನಸಂದಣಿ ಸೇರುವ ಶಾಪಿಂಗ್ ಮಾಲ್ಗಳು, ತಾರಾ ಹೋಟೆಲ್ಗಳು, ವಿದೇಶಿ ರಾಜತಾಂತ್ರಿಕ ಕಚೇರಿಗಳು
ವಸತಿ ಮತ್ತಿತರ ಕಟ್ಟಡಗಳು, ಭಾರಿ ಕೈಗಾರಿಕೆಗಳು, ಜನ ಸಂದಣಿ ಸೇರುವ ದೇವಾಲಯಲಗಳು, ಮಸೀದಿ ಹಾಗೂ ಚರ್ಚ್ಗಳು ಸೇರಿ ಜನಸಂದಣಿ ಸ್ಥಳಗಳಲ್ಲಿ ಕಟ್ಟೆಚ್ಚರಕ್ಕೆ ಸೂಚನೆ ನೀಡಿದ್ದಾರೆ.