ಬೆಂಗಳೂರು: ಒನ್ ವೇನಲ್ಲಿ ಬಂದು ಅತಿರೇಕದ ವರ್ತನೆ ತೋರಿದ್ದ ಬೈಕ್ ಸವಾರನ ವಿರುದ್ಧ ಸಂಚಾರಿ ಪೊಲೀಸರು ಎಫ್ ಐಆರ್ ದಾಖಲಿಸಿದ್ದಾರೆ.
ಹಲಸೂರು ಗೇಟ್ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ. ಏ. 4ರಂದು ಒನ್ ಮೇನಲ್ಲಿ ಬಂದು ಬೈಕ್ ಸವಾರ ಶಂಕರ್ ಎಂಬಾತ ಕಾರಿಗೆ ಅಡ್ಡವಾಗಿ ನಿಂತು ಅತಿರೇಕದ ವರ್ತನೆ ತೋರಿದ್ದ.
ತಮ್ಮ ರಸ್ತೆಯಲ್ಲೇ ಬರುತ್ತಿದ್ದ ಕಾರಿಗೆ ದಾರಿ ಬಿಡದೆ ದುರ್ವತನೆ ತೋರಿದ್ದ. ಈ ವಿಡಿಯೋ ಮೊಬೈಲ್ ನಲ್ಲಿ ಸೆರೆಯಾಗಿತ್ತು. ಎಕ್ಸ್ ನಲ್ಲಿ ವಿಡಿಯೋ ಅಪ್ಲೋಡ್, ಪೊಲೀಸರಿಗೆ ಟ್ಯಾಗ್ ಮಾಡಿ ಕ್ರಮಕ್ಕೆ ಆಗ್ರಹಿಸಲಾಗಿತ್ತು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಬೈಕ್ ಪತ್ತೆ ಹಲಸೂರು ಗೇಟ್ ಟ್ರಾಫಿಕ್ ಪೊಲೀಸರು ಸೀಜ್ ಮಾಡಿದ್ದಾರೆ.