ನವದೆಹಲಿ: ಭಾರತೀಯ ಸೈನಿಕರು ತಮ್ಮ ಶಕ್ತಿ ಏನು ಎಂಬುವುದನ್ನು ಚೀನಾ ಸೈನಿಕರಿಗೆ ತೋರಿಸಿದ್ದಾರೆ.
ಈ ಮೂಲಕ ಚೀನಾ ಸೈನಿಕರಿಗೆ ಭಾರತೀಯ ಹೆಮ್ಮೆಯ ಸೈನಿಕರು (Indian) ತಮ್ಮ ಶಕ್ತಿ ಏನೆಂದು ತೋರಿಸಿದ್ದಾರೆ. ಭಾರತೀಯ ಸೈನಿಕರು ಮತ್ತು ಚೀನಾ ಸೈನಿಕರ (China Soldiers) ನಡುವೆ ಹಗ್ಗಜಗ್ಗಾಟ (Tough of War) ದ ವಾರ್ ನಡೆದಿತ್ತು. ಈ ಸ್ಪರ್ಧೆ ಭಾರೀ ತುರಿಸಿನಿಂದ ನಡೆದಿತ್ತು. ಈ ವೇಳೆ ಭಾರತದ ಸೈನಿಕರು ಪಟ್ಟು ಬಿಡದೇ ಚೀನಾ ವಿರುದ್ಧ ವಿಜಯಶಾಲಿಯಾಗಿದ್ದಾರೆ.
ಇದಕ್ಕೆ ಸಂಬಂಧಿಸಿದ 49 ಸೆಕೆಂಡಿನ ವಿಡಿಯೋ ಈಗ ಭಾರೀ ವೈರಲ್ ಆಗಿದೆ. ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯಲ್ಲಿರುವ (United Nations Peacekeeping Mission) ಭಾರತೀಯ ಸೈನಿಕರು ಸೂಡಾನ್‌ನಲ್ಲಿ ಕರ್ತವ್ಯ ನಿರ್ವಹಿಸ್ತಿದ್ದಾರೆ. ಈ ಸಂದರ್ಭದಲ್ಲಿಯೇ ಈ ಸ್ಪರ್ಧೆ ನಡೆದಿದೆ ಎನ್ನಲಾಗಿದೆ. ಭಾರತೀಯರು ಗೆದ್ದಿರುವ ಈ ವಿಡಿಯೋಗೆ ಎಲ್ಲರೂ ಹೆಮ್ಮೆಯಿಂದ ಕಮೆಂಟ್ ಮಾಡುತ್ತಿದ್ದಾರೆ.