ಗುಜರಾತ್ : ಪ್ರಜಾಪ್ರಭುತ್ವದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುವುದು ಸಾಮಾನ್ಯ. ಸಂವಿಧಾನವನ್ನು ಉಳಿಸುವುದು ಹಾಗೂ ಪ್ರಜಾಪ್ರಭುತ್ವವನ್ನು ರಕ್ಷಿಸುವುದು ನಮ್ಮ ಪ್ರಮುಖ ಗುರಿ” ಎಂದು ರಾಷ್ಟ್ರೀಯ ಕಾಂಗ್ರೆಸ್ ನ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರ
ವರದಿಗಾರರೊಂದಿಗೆ ಮಾತನಾಡಿ “ಗುಜರಾತ್ ಮಹಾತ್ಮ ಗಾಂಧಿ ಹಾಗೂ ವಲ್ಲಭಭಾಯಿ ಪಟೇಲ್ ಅವರಂತಹ ಜನರು ಜನಿಸಿದ ಹಾಗೂ ದೇಶಕ್ಕೆ ಸ್ವಾತಂತ್ರ್ಯ ಗಳಿಸಿದ ಭೂಮಿ ಈ ಇಬ್ಬರೂ ನಮಗೆ ಅತ್ಯಂತ ಗೌರವಾನ್ವಿತರು. ಅವರಿಂದಾಗಿ ದೇಶವು ಒಂದಾಗಿದೆ. ಸಂವಿಧಾನ ಸುರಕ್ಷಿತವಾಗಿರದಿರಲು, ಪ್ರಜಾಪ್ರಭುತ್ವವನ್ನು ಉಳಿಸಲು ಬಯಸದ ಇನ್ನಿಬ್ಬರು ಈ ರಾಜ್ಯದವರಿದ್ದಾರೆ” ಎಂದು ಮೋದಿ ಮತ್ತು ಅಮಿತ್ ಶಾ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
”ಉಪರಾಷ್ಟ್ರಪತಿ ಚುನಾವಣೆಯಲ್ಲಿ ನಮ್ಮ ಬಳಿ ಬಹುಮತವಿರಲಿಲ್ಲ. ಎಷ್ಟು ಮತ ಹೊಂದಿದ್ದೇವೋ ಅಷ್ಟು ಮತಗಳು ನಮಗೆ ಬಂದಿವೆ’ ಎಂದಿದ್ದಾರೆ.