ಬೆಂಗಳೂರು : ಬದುಕು ಕಟ್ಟಿಕೊಳ್ಳಲು ಗೋವಾಕ್ಕೆ ತೆರಳಿದ್ದ ರಾಜ್ಯದ ವಿಜಯಪುರ ಮೂಲದ ಟ್ರಕ್ ಚಾಲಕ ಅನಿಲ್ ರಾಥೋಡ್ ಮೇಲೆ ಹಲ್ಲೆ ನಡೆಸಿರುವುದನ್ನು ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿ ಅವರು ತೀವ್ರವಾಗಿ ಖಂಡಿಸಿದ್ದಾರೆ.
ಈ ಸಂಬಂಧಿಸಿ ಪ್ರತಿಕ್ರಿಯಿಸಿರು ಕರವೇ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ, ”ಟ್ರಕ್ ಚಾಲಕ ಹಾಗೂ ಮಾಲೀಕನಾಗಿರುವ ಅನಿಲ್ ರಾಥೋಡ್ ಅವರಿಗೆ ಸುಮಾರು ಆರು ತಿಂಗಳಿಂದ ಸ್ಥಳೀಯ ಟ್ರಕ್ ಅಸೋಸಿಯೇಷನ್ ತೊಂದರೆ ಕೊಡುತ್ತಿರುವುದಾಗಿ ಸ್ಥಳೀಯ ಪೊಲೀಸ್ ಠಾಣೆಗೆ ದಾಖಲಿಸಿದ್ದಾರೆ. ಆದರೂ ಸಹ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಹಲ್ಲೆಗೊಳಗಾದ ಚಾಲಕ ತೀವ್ರ ಗಾಯಗೊಂಡಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ, ದೂರು ದಾಖಲಿಸಲಿದ್ದೇವೆ” ಎಂದು ತಿಳಿಸಿದ್ದಾರೆ.
ಗೋವಾದಲ್ಲಿಯೂ ಬಿಜೆಪಿ ಸರ್ಕಾರವಿದೆ. ಗೋವಾ ಎಂದರೆ ಸ್ವಾತಂತ್ರ್ಯ ದೇಶವೇ ? ಬಿ.ವೈ ವಿಜಯೇಂದ್ರ, ಆರ್. ಅಶೋಕ್, ರಾಜೀವ್ ಪಿ ಸೇರಿ ಅನೇಕ ರಾಜಕೀಯ ನಾಯಕರಿದ್ದಾರೆ ಅವರೆಲ್ಲಾ ಈ ಪ್ರಕರಣದ ಬಗ್ಗೆ ಯಾಕೆ ಮೌನವಾಗಿದ್ದಾರೆ ? ಎಂದು ಕಟುವಾಗಿ ಪ್ರಶ್ನಿಸಿದ್ದಲ್ಲದೇ, ಮಾನ್ಯ ಸಿಎಂ ಸಿದ್ದರಾಮಯ್ಯ ಅವರು ಹಾಗೂ ಗೃಹಮಂತ್ರಿಗಳಾದ ಪರಮೇಶ್ವರ್ ಅವರು ಗೋವಾ ಸರ್ಕಾರದೊಂದಿಗೆ ಮಾತನಾಡಿ ತಪ್ಪಿತಸ್ಥರಿಗೆ ಸೂಕ್ತ ಕ್ರಮವಹಿಸುವಂತೆ ಮಾಡದಿದ್ದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ದಾಳಿ ಮಾಡಲಿದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಗೋವಾದಲ್ಲಿ ಶೇ.30ರಷ್ಟು ಕನ್ನಡಿಗರಿದ್ದಾರೆ. ಕನ್ನಡಿಗರು ಪ್ರಯತ್ನಿಸಿದರೇ ಸರ್ಕಾರವನ್ನು ಕೆಡುವುದಕ್ಕೆ ನಾವು ಸಮರ್ಥರಿದ್ದೇವೆ. ಕನ್ನಡಿಗರಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ರಾಜ್ಯ ಸರ್ಖಾರ ಹಾಗೂ ಪ್ರಧಾನಿಗಳಿಗೆ ಮನವಿ ಮಾಡುತ್ತೇನೆ. ನಮ್ಮ ಬೇಡಿಕೆ ಈಡೇರಿಲ್ಲವೆಂದರೇ ಗೋವಾದಲ್ಲಿ ಬೃಹತ್ ಚಳುವಳಿ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.