ಶಿವಮೊಗ್ಗ: ಸಾಲದ ಕಂತು ಕಟ್ಟಿಲ್ಲ ಎಂದು ಪೈನಾನ್ಸ್ ಸಿಬ್ಬಂದಿಯೊಬ್ಬ ರೈತನ ಹಸುಗಳನ್ನು ಕರೆದುಕೊಂಡು ಬಂದಿರುವ ಘಟನೆ ಶಿವಮೊಗ್ಗ ನಗರದಲ್ಲಿ ನಡೆದಿದೆ.
ಶಿವಮೊಗ್ಗದ ಗಾರ್ಡ್ ನ್ ಏರಿಯಾದಲ್ಲಿ ಇರುವ ಆಯ್ ಫೈನಾನ್ಸ್ ಸಿಬ್ಬಂದಿಗಳಿಂದ ದಬ್ಬಾಳಿಕೆ ಆರೋಪ ಕೇಳಿ ಬಂದಿದೆ.
ಶಿವಮೊಗ್ಗ ತಾಲೂಕಿನ ಸಿದ್ಲಿಪುರ ಗ್ರಾಮ ಭರತ್ ಎಂಬ ರೈತನ ಮೂರು ಹಸು ಮೇಲೆ ಸಾಲ 2 ಲಕ್ಷ ರೂ. ಸಾಲ ಪಡೆದಿದ್ದ, ಕೇವಲ ಒಂದು ತಿಂಗಳ ಸಾಲದ ಕಂತು 9300 ರೂ. ಬಾಕಿ ಇತ್ತು. ಈ ಹಿನ್ನಲೆ ಇಂದು ಬೆಳಗ್ಗೆ ಫೈನಾನ್ಸ್ ಸಿಬ್ಬಂದಿ ವಾಹನದಲ್ಲಿ ತೆಗೆದುಕೊಂಡು ಬಂದು ಒಂದು ಎತ್ತು, ಎರಡು ಹಸುಗಳನ್ನು ಸೀಜ್ ಮಾಡಿದ್ದಾರೆ.

ಸದ್ಯ ಈ ಸಂಬಂಧ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಡ್ರಗ್ಸ್ ಮುಕ್ತ ಕರ್ನಾಟಕ ನನ್ನ ಗುರಿ, ಇದು ನಿಮ್ಮ ಗುರಿಯೂ ಆಗಲಿ | ಸಿಎಂ ಸಿದ್ದರಾಮಯ್ಯ ಕರೆ



















