ನಾಯಕತ್ವ ಬದಲಾವಣೆ ಅಭಿಪ್ರಾಯವನ್ನೇ ಪಡೆದುಕೊಂಡಿಲ್ಲ ಅಂದ ಮೇಲೆ ಬದಲಾವಣೆ ಎಲ್ಲಿದೆ? ಸಿಎಂ ಸಿದ್ದರಾಮಯ್ಯ ಅವರು ಸ್ಪಷ್ಟವಾಗಿ ಹೇಳಿದ್ದಾರೆ ನಾನಾಗಲೀ ಡಿ ಕೆ ಶಿವಕುಮಾರ್ ಆಗಲಿ ಹೈ ಕಮಾಂಡ್ ಮಾತಿಗೆ ಬದ್ದವೆಂದು ಹೇಳಿದ್ದಾರೆಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ವಿಕಾಸಸೌಧದಲ್ಲಿ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ಶಿವಕುಮಾರ್ ಕೂಡ ಸಿಎಂ ಸೀಟು ಖಾಲಿ ಇಲ್ಲವೆಂದು ಹೇಳಿದ್ದಾರೆ. ಹೀಗಂದ ಮೇಲೆ ಬದಲಾವಣೆ ಎಲ್ಲಿದೆ ಎಂದು ಪ್ರಶ್ನಿಸಿದ್ದಲ್ಲದೇ, ನಾವು ಪಕ್ಷದ ವಿಚಾರಗಳನ್ನು ಮಾಧ್ಯಮಗಳ ಮುಂದೆ ಮಾತನಾಡುವುದು ಸರಿ ಅಲ್ಲ. ನಾಯಕತ್ವದ ಬದಲಾವಣೆಯ ಅಭಿಪ್ರಾಯವನ್ನು ಪಡೆಯಲೇ ಇಲ್ಲ ಅಂದಮೇಲೆ. ಬದಲಾವಣೆಯ ಮಾತೆಲ್ಲಿ? ಹೈಕಮಾಂಡ್ ಬಹಳ ಸ್ಪಷ್ಟವಾಗಿ ಹೇಳಿದೆ ಎಂದಿದ್ದಾರೆ.
ರಣದೀಪ್ ಸುರ್ಜೇವಾಲಾ, ಡಿಕೆ ಶಿವಕುಮಾರ್ ಸೇರಿ ಎಲ್ಲರೂ ಹೇಳಿದಾರೆ. ಡಾ.ರಂಗನಾಥ್ ಕೂಡ ಸ್ಪಷ್ಟವಾಗಿ ಹೇಳಿದಾರೆ. ವರ್ಷ ಪಕ್ಷಕ್ಕೆ ದುಡಿದಿದ್ದಾರೆ.ಇಂದಲ್ಲ ನಾಳೆ ಡಿಕೆಶಿ ಸಿಎಂ ಆಗುತ್ತಾರೆಂದು ಹೇಳಿದ್ದಾರೆ. ಇಷ್ಟು ಸ್ಪಷ್ಟತೆ ಪಕ್ಷದಲ್ಲಿರುವಾಗ ಬದಲಾವಣೆಯ ಎಲ್ಲಿ ಬಂತು ಎಂದು ಅವರು ಪ್ರಶ್ನಿಸಿದ್ದಾರೆ.