ಭೋಪಾಲ್: ಬಾಲ್ಯದ ಗೆಳತನ (Childhood friendship) ಎಂದಿಗೂ ಮರೆಯಲಾಗದ ಬಂಧ ಎಂದು ಹೇಳುತ್ತಾರೆ. ಆದರೆ, ಬಾಲ್ಯದ ಗೆಳೆಯನೇ ಕೇವಲ 2400 ರೂ.ಗೆ ಕೊಲೆ ಮಾಡಿರುವ ಘಟನೆಯೊಂದು ವರದಿಯಾಗಿದೆ.
ಮಧ್ಯಪ್ರದೇಶದ (Madhya Pradesh) ಜಬಲ್ಪುರದಲ್ಲಿ ಈ ಘಟನೆ ನಡೆದಿದೆ. ಗೆಳೆಯನ ಮರ್ಮಾಂಗಕ್ಕೆ (Private Part) 100ಕ್ಕೂ ಅಧಿಕ ಬಾರಿ ಒದ್ದು ಕೊಲೆ ಮಾಡಿದ್ದಾನೆ. ಗೆಳೆಯ ಸತ್ತರೂ ಆತನ ಕ್ರೂರತೆ ಮುಂದುವರಿದಿತ್ತು ಎನ್ನಲಾಗಿದೆ.
ಆರೋಪಿಯು ಮರ್ಮಾಂಗಕ್ಕೆ ಹೆಚ್ಚು ಪೆಟ್ಟು ಬಿದ್ದ ನಂತರ ಮೃತದೇಹದ ಗುರುತು ಸಿಗಬಾರದು ಎಂದು ಮುಖವನ್ನು ಕಲ್ಲಿನಿಂದ ಜಜ್ಜಿ ವಿಕಾರಗೊಳಿಸಿದ್ದಾನೆ. ಸಾವನ್ನಪ್ಪಿದ ವ್ಯಕ್ತಿ ಗೆಳಯನಿಂದ ಸಾಲವಾಗಿ ಎರಡೂವರೆ ಸಾವಿರ ರೂಪಾಯಿ ಪಡೆದುಕೊಂಡು ಮರಳಿ ನೀಡಿರಲಿಲ್ಲ. ಹೀಗಾಗಿ ಕೋಪಗೊಂಡ ಪಾಪಿ ಸ್ನೇಹಿತ ಮರ್ಮಾಂಗಕ್ಕೆ ಒದ್ದು ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿ ಪಪ್ಪು ಎಂಬಾತನನ್ನು ಬಂಧಿಸಿದ್ದಾರೆ. ಸಂಜು ಲೋಧಿ ಕೊಲೆಯಾಗಿರುವ ವ್ಯಕ್ತಿ. ಸಂಜು ಮತ್ತು ಪಪ್ಪು ಮಧ್ಯೆ 2,500 ರೂಪಾಯಿಗಾಗಿ ಜಗಳ ಶುರುವಾಗಿತ್ತು. ಈ ವೇಳೆ ಕೋಪದಲ್ಲಿ ಪಪ್ಪು ಗೆಳೆಯ ಸಂಜು ಮರ್ಮಾಂಗಕ್ಕೆ ಒದ್ದು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಸಂಜು ಮತ್ತು ಪಪ್ಪು 10 ವರ್ಷಗಳಿಂದ ಗೆಳಯರಾಗಿದ್ದು, ಜೊತೆಯಲ್ಲಿಯೇ ಡ್ರೈವರ್ ಮತ್ತು ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದರು. ಕೊಲೆ ಮಾಡಿದ ನಂತರ ಶವವನ್ನು ಬೈಕ್‌ನಲ್ಲಿ ನಿರ್ಜನ ಪ್ರದೇಶಕ್ಕೆ ತಂದು ಸುಡಲು ಆರೋಪಿ ಮುಂದಾಗಿದ್ದ ಎನ್ನಲಾಗದೆ. ಆದರೆ, ಭಾರೀ ಮಳೆಯಾದ ಹಿನ್ನೆಲೆಯಲ್ಲಿ ಪಪ್ಪು ನಿರ್ಧಾರ ವಿಫಲವಾಗಿತ್ತು. ಸದ್ಯ ಆರೋಪಿಯನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸಿದ್ದಾರೆ.