ಹುಬ್ಬಳ್ಳಿ : ಒಂದು ಕಡೆ ಅತಿವೃಷ್ಟಿ ಇನ್ನೊಂದು ಕಡೆ ಈರುಳ್ಳಿ ದರ ಕುಸಿತದಿಂದ ರೈತರು ಕಂಗಾಲಾಗಿ ಪ್ರತಿಭಟನೆಗೆ ಮುಂದಾಗಿದ್ದಾರೆ.
ಹುಬ್ಬಳ್ಳಿಯ ರೈತರು ಈರುಳ್ಳಿ ಬೆಲೆ ಇಳಿಕೆಯನ್ನು ವಿರೋಧಿಸಿ ನಗರದ ಎಪಿಎಂಸಿ ಮುಖ್ಯ ಗೇಟ್ ಎದುರು ರತ್ನ ಭಾರತ ರೈತ ಸಮಾಜದ ನೇತೃತ್ವದಲ್ಲಿ ರಸ್ತೆ ಮೇಲೆ ಈರುಳ್ಳಿ ಚೆಲ್ಲುವುದರ ಮೂಲಕ ಹೋರಾಟ ಮಾಡುತ್ತಿದ್ದಾರೆ.
ರೈತರೊಂದಿಗೆ ದಲ್ಲಾಳಿಗಳು ಚೆಲ್ಲಾಟ ಆಡುತ್ತಿದ್ದು, ಇದರ ಪರಿಣಾಮವಾಗಿ ಎಪಿಎಂಸಿಯಲ್ಲಿ ದರ ಕುಸಿತವಾಗಿದೆ. ಪ್ರತಿ ಕ್ವಿಂಟಲ್‌ಗೆ 200 ರಿಂದ 300 ರೂ ದರ ಸಿಗುತ್ತಿದೆ. ಆದರೆ ಪ್ರತಿ ಕ್ವಿಂಟಲ್ ಈರುಳ್ಳಿ ಬೆಳೆಯಲ್ಲಿ ಸಾವಿರ ರೂಪಾಯಿ ಖರ್ಚಾಗುತ್ತದೆ, ಕೂಡಲೇ ಸರ್ಕಾರ ಮಾರುಕಟ್ಟೆ ಮಧ್ಯ ಪ್ರವೇಶ ಮಾಡಬೇಕು ಪ್ರದೀಪ್ ವಿಂಡಲ್ ಈರುಳ್ಳಿಗೆ 2 ರಿಂದ ಎರಡುವರೆ ಸಾವಿರ ದರ ನಿಗದಿ ಮಾಡಬೇಕು. ಈರುಳ್ಳಿಯನ್ನು ಸರ್ಕಾರವೇ ಖರೀದಿಸಬೆಕೆಂದು ಆಗ್ರಹಿಸುತ್ತಿದ್ದಾರೆ.