ಹೊಸದಿಲ್ಲಿ: ಲೋಕಸಭೆಯಲ್ಲಿ ಇಂದು ಒಂದು ರಾಷ್ಟ್ರ ಒಂದು ಚುನಾವಣೆ ವಿಧೇಯಕ ಮಂಡನೆಯಾಯಿತು.
ಒಂದು ರಾಷ್ಟ್ರ ಒಂದು ಚುನಾವಣೆ’ ಮಸೂದೆ ಎಂದು ಉಲ್ಲೇಖಿಸಲ್ಪಡುವ ಸಂವಿಧಾನ (ನೂರಾ ಇಪ್ಪತ್ತೊಂಬತ್ತನೇ ತಿದ್ದುಪಡಿ) ತಿದ್ದುಪಡಿ ಮಸೂದೆ-2024 ನ್ನು ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಲೋಕಸಭೆಯಲ್ಲಿ ಮಂಡಿಸಿದ್ದಾರೆ.
ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ನೇತೃತ್ವದ ಉನ್ನತ ಮಟ್ಟದ ಸಮಿತಿ ಶಿಫಾರಸು ಮಾಡಿದ್ದ ವರದಿಗೆ ಕೇಂದ್ರ ಸಚಿವ ಸಂಪುಟ ಇತ್ತೀಚೆಗೆ ಅನುಮೋದನೆ ನೀಡಿತ್ತು. ಸರ್ಕಾರ ಯೋಜಿಸಿದಂತೆ ಸೋಮವಾರ ವಿಧೇಯಕ ಮಂಡನೆಯಾಗಬೇಕಿತ್ತು. ಆದರೆ ಸಂಭಾಲ್ ಹಿಂಸಾಚಾರ, ಅದಾನಿ ಪ್ರಕರಣ ನಡುವೆ ಇದು ಮತ್ತೊಂದು ಸುತ್ತಿನ ಗದ್ದಲಕ್ಕೆ ಕಾರಣವಾಗಲಿದೆ ಎಂಬ ಕಾರಣಕ್ಕೆ ಮುಂದೂಡಲಾಗಿತ್ತು.
ವಿಪಕ್ಷಗಳು ಈ ಮಸೂದೆಯನ್ನು ವಿರೋಧಿಸಿವೆ. ಇದು ದೇಶದ ಒಕ್ಕೂಟ ರಚನೆಗೆ ಬೆದರಿಕೆ ಹಾಗೂ ರಾಜ್ಯಗಳ ಪಾತ್ರ ಕುಗ್ಗಿಸುವ ಪ್ರಸ್ತಾಪ ಎಂದು ಟೀಕಿಸಿದ್ದಾರೆ