ಬೆಂಗಳೂರು: ಯುವಕನೋರ್ವ ಮಧ್ಯಪಾನ ಮಾಡಿ, ರಸ್ತೆಯಲ್ಲಿ ಬಿಎಂಟಿಸಿ ಅಡ್ಡ ಗಟ್ಟಿ ಕೆಲಕಾಲ ತೊಂದರೆ ಮಾಡಿರುವ ಘಟನೆ ನಡೆದಿದೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ವಿಪರೀತ ಮದ್ಯ ಸೇವಿಸಿರುವ ವ್ಯಕ್ತಿ ಬಿಎಂಟಿಸಿ ಬಸ್ ತಡೆದು, ರಸ್ತೆಯನ್ನೇ ಬ್ಲಾಕ್ ಮಾಡಿದ್ದಾನೆ. ಹೀಗಾಗಿ ರಸ್ತೆಯಲ್ಲೇ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿದೆ.
ಬಸ್ ಅಡ್ಡಗಟ್ಟಿದ್ದ ಯುವಕ ಕಂಡಕ್ಟರ್ ಕಾಲು ಬಿದ್ದು ಕ್ಷಮ ಕೇಳಿದ್ದಾನೆ. ತಪ್ಪಾಯಿತು ಅಂತ ಹಿಂದಿಯಲ್ಲಿ ಕೇಳಿ, ಮತ್ತೆ ಬಸ್ ಗೆ ಅಡ್ಡ ನಿಂತಿದ್ದಾನೆ. ಯುವಕನ ವರ್ತನೆ ಕಂಡು ಸವಾರರೆಲ್ಲರೂ ಗರಂ ಆಗಿದ್ದಾರೆ. ಆಗ ಬೇರೆ ಬಸ್ ನ ಕಂಡಕ್ಟರ್ ಬಂದ ಮೇಲೆ ಮತ್ತೆ ಕಾಲು ಬೀಳಲು ಮುಂದಾಗಿದ್ದಾನೆ. ಆನಂತರ ಯುವಕನನ್ನು ರಸ್ತೆ ಬದಿಗೆ ಕಂಡಕ್ಟರ್ ಕಳುಹಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.