ಇತ್ತೀಚೆಗೆ ಸಣ್ಣ ವಿಚಾರಕ್ಕೆ ಪತಿ, ಪತ್ನಿ ಮಧ್ಯೆ ಗಲಾಟೆ ನಡೆಯುತ್ತಿರುವುದು ಸಾಮಾನ್ಯವಾಗಿ ಬಿಟ್ಟಿದೆ. ಈ ಮಧ್ಯೆ ಉತ್ತರ ಪ್ರದೇಶದಲ್ಲಿ ಚಿಕ್ಕಮಗಳಂತೆ ಚಿಪ್ಸ್ ಗೆ ಜಗಳವಾಡಿ ಡಿವೋರ್ಸ್ ಗೆ ಅರ್ಜಿ ಸಲ್ಲಿಸಿರುವ ಘಟನೆ ನಡೆದಿದೆ.
ಉತ್ತರ ಪ್ರದೇಶದ ಆಗ್ರಾದಲ್ಲಿ ಇಂತಹ ಘಟನೆಯೊಂದು ನಡೆದಿದೆ. ಮಹಿಳೆಯೊಬ್ಬಳು ತನ್ನ ಪತಿ 5 ರೂಪಾಯಿ ಕುರ್ಕುರೆ ಚಿಪ್ಸ್ ತರಲಿಲ್ಲ ಎಂದು ಪತ್ನಿಯೊಬ್ಬರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ಅಲ್ಲದೇ, ಡಿವೋರ್ಸ್ ಗೆ ಮುಂದಾಗಿದ್ದಾಳೆ.
ಆಜ್ ತಕ್ ವರದಿಯಂತೆ, ಮಹಿಳೆ ಕಳೆದ ಒಂದೂವರೆ ತಿಂಗಳಿನಿಂದ ತನ್ನ ತಾಯಿಯ ಮನೆಯಲ್ಲಿ ವಾಸಿಸುತ್ತಿದ್ದಾಳೆ. ನಂತರ ತನ್ನ ಪತಿಯ ವಿರುದ್ಧ ದೂರು ನೀಡಲು ಠಾಣೆಗೆ ಹೋಗಿದ್ದಾಳೆ. ಸದ್ಯ ಮಹಿಳೆಯ ದೂರನ್ನು ಫ್ಯಾಮಿಲಿ ಕೌನ್ಸೆಲಿಂಗ್ ಸೆಲ್ ಗೆ ಕಳುಹಿಸಲಾಗಿದೆ. ಈ ಮಧ್ಯೆ ಕೌನ್ಸೆಲಿಂಗ್ ನಲ್ಲಿ ಇಬ್ಬರೂ ಪರಸ್ಪರ ಜಗಳವಾಡಿದ್ದಾರೆ. 5 ರೂ. ಚಿಪ್ಸ್ ನಿಂದಲೇ ಅವರಿಬ್ಬರು ಡಿವೋರ್ಸ್ ಗೆ ಮುಂದಾಗಿದ್ದಾರೆ ಎನ್ನಲಾಗಿದೆ.
ಕೌನ್ಸಿಲಿಂಗ್ ಮಾಡಿದ ಡಾ.ಸತೀಶ್ ಖೀರವಾರ ಅವರು ಹೇಳುವಂತೆ “ಕಳೆದ ವರ್ಷ (2023 ರಲ್ಲಿ) ವಿವಾಹವಾಗಿದ್ದ ಈ ಜೋಡಿ, ಒಂದೇ ವರ್ಷದಲ್ಲಿ ವಿಚ್ಛೇದನಕ್ಕೆ ಮುಂದಾಗಿದೆ. ಪತಿ ತನಗೆ ಹೊಡೆಯುತ್ತಾನೆ ಎಂದು ಹೆಂಡತಿ ಹೇಳಿದರೆ, 5 ರೂಪಾಯಿ ಬೆಲೆಯ ಕುರ್ಕುರೆಗೆ ಹೆಂಡತಿ ಜಗಳವಾಡಿದ್ದಾಳೆ ಎಂದು ಪತಿ ಹೇಳಿದ್ದಾನೆ ಎಂದು ತಿಳಿಸಿದ್ದಾರೆ.