ಬೆಂಗಳೂರು : ಫೇಕ್ ಅಕೌಂಟ್‌ಗಳಿಂದ ನಟಿ ರಮ್ಯಾಗೆ ಅಶ್ಲೀಲ ಮೆಸೇಜ್ ಕಳಿಸಿದಿರುವುದನ್ನು ಖಂಡಿಸಿ ಇಂದು ಫಿಲಂ ಚೇಂಬರ್ ಅಧ್ಯಕ್ಷರಿಗೆ ಮಾಜಿ ಫಿಲಂ ಚೇಂಬರ್ ಅಧ್ಯಕ್ಷ ಭಾ. ಮಾ ಹರೀಶ್ ಹಾಗೂ ಕೆಲವು ನಿರ್ಮಾಪಕರು ಮನವಿಯನ್ನು ಸಲ್ಲಿಸಿದ್ದಾರೆ.
ಈ ಬಗ್ಗೆ ಸುದ್ಧಿಗೋಷ್ಠಿಯನ್ನು ನಡೆಸಿದ ಅವರು, ಅಶ್ಲೀಲ ಮೆಸೇಜ್ ಕಳಿಸುವ ಸೋಶಿಯಲ್‌ಮೀಡಿಯಾ ಪುಂಡರಿಗೆ ಬ್ರೇಕ್ ಹಾಕಬೇಕು. ಫೆಕ್ ಅಕೌಂಟ್‌ಗಳು ರಮ್ಯಾಗೆ ಮೆಸೇಜ್ ಕಳಿಸಿದವರನ್ನು ಬುಡ ಸಮೇತ ಕಿತ್ತು ಹಾಕಬೇಕು. ಯಾವುದೇ ನಟ ನಟಿಯರಿಗಾಗಲಿ ಫೆಕ್ ಅಕೌಂಟ್ ನಿಂದ ಈ ರೀತಿ ಮೆಸೇಜ್ ಮಾಡುವುದು ನಿಲ್ಲಬೇಕು. ಅವರಿಗೆ ಸಾಮರ್ಥ್ಯ ಇದ್ದರೆ ನೇರವಾಗಿ ಮಾತನಾಡುವಂತ ಬೆಳವಣಿಗೆ ಆಗಬೇಕು. ಇದನ್ನು ಸಿಎಂ, ಡಿಸಿಎಂ, ಗೃಹ ಮಂತ್ರಿಗಳ ಗಮನಕ್ಕೆ ತನ್ನಿ ಎಂದು ಫಿಲಂ ಚೇಂಬರ್ ಅಧ್ಯಕ್ಷರಿಗೆ ಮನವಿ ಮಾಡಿದ್ದಾರೆ.