ಪುತ್ತೂರು: ಹಿಂದೂ ಯುವಕನ ಫೋಟೋ ಬಳಸಿ ಆಕ್ಷೇಪಾರ್ಹ ಪೋಸ್ಟ್ ಮಾಡಿರುವ ಆರೋಪವೊಂದು ಕೇಳಿ ಬಂದಿದೆ.
ಹತ್ಯೆಗೀಡಾದ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಪ್ರಕರಣಕ್ಕೆ ತಾಳೆ ಹಾಕಿ ಪೋಸ್ಟ್ ಮಾಡಿದ್ದಾರೆ ಎನ್ನಲಾಗಿದೆ. ಸುಹಾಸ್ ಹತ್ಯೆ ಆರೋಪಿಗಳಿಗೆ ಕಾರು ನೀಡಿದ ಹಿಂದೂ ಯುವಕ ಎಂಬ ತಲೆಬರಹದಲ್ಲಿ ಪೋಟೋ ವೈರಲ್ ಆಗಿದೆ. ಸುಬ್ರಹ್ಮಣ್ಯ ನಿವಾಸಿ ತಶ್ವಿತ್ ಎನ್ನುವ ಯುವಕನ ಫೋಟೋ ಬಳಕೆ ಮಾಡಿಕೊಂಡು ಕಿಡಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದಾರೆ.
ಇದರಿಂದ ಯುವಕ ನೊಂದು ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ಈ ಫೋಟೋವನ್ನು ಕಿಡಿಗೇಡಿಗಳು ಮುಸ್ಲಿಂ ಪೇಜ್ ಗಳಲ್ಲಿ ಹಂಚಲಾಗುತ್ತಿದೆ. ಈ ಕುರಿತು ಪೊಲೀಸರು ಈಗ ತನಿಖೆ ನಡೆಸುತ್ತಿದ್ದಾರೆ.



















