ಬೆಂಗಳೂರು: ದೇಶೀಯವಾಗಿ ಎಲೆಕ್ಟ್ರಿಕ್ ವಾಹನಗಳ ತಯಾರಿಕೆಯಲ್ಲಿ ಪರಿಣತಿ ಹೊಂದಿರುವ ನ್ಯುಮೆರೋಸ್ ಮೋಟಾರ್ಸ್, ಇಂದು (ಶುಕ್ರವಾರ) ತನ್ನ ಬಹುಪಯೋಗಿ ಇ-ಸ್ಕೂಟರ್ ‘ಡಿಪ್ಲೋಸ್ ಮ್ಯಾಕ್ಸ್’ನ ಸುಧಾರಿತ ಆವೃತ್ತಿಯಾದ ‘ಡಿಪ್ಲೋಸ್ ಮ್ಯಾಕ್ಸ್+’ ಅನ್ನು ಬಿಡುಗಡೆ ಮಾಡಿದೆ. ಸ್ವಚ್ಛ ಚಲನಶೀಲತೆಯನ್ನು ಮರು ವ್ಯಾಖ್ಯಾನಿಸುವ ಗುರಿಯೊಂದಿಗೆ, ಡಿಪ್ಲೋಸ್ ಮ್ಯಾಕ್ಸ್+ ವೈಯಕ್ತಿಕ ಚಲನಶೀಲತೆ ವಿಭಾಗದಲ್ಲಿ ಕಂಪನಿಯ ಪ್ರಯತ್ನಗಳನ್ನು ಹೆಚ್ಚಿಸಿದೆ.
ಡಿಪ್ಲೋಸ್ ಮ್ಯಾಕ್ಸ್+ ಐದು ಹೊಸ ಅಪ್ಡೇಟ್ಗಳೊಂದಿಗೆ ಬಂದಿದೆ. ಇದು ಹೊಸ ನೋಟ ಮತ್ತು ಡ್ಯುಯಲ್ ಕಲರ್ ವೇರಿಯೆಂಟ್ಗಳನ್ನು ಹೊಂದಿದೆ. 4.0 kWh ಸಾಮರ್ಥ್ಯದ ಡ್ಯುಯಲ್ ಲಿಕ್ವಿಡ್ ಇಮ್ಮರ್ಶನ್ ಕೂಲಿಂಗ್ ಬ್ಯಾಟರಿ ಪ್ಯಾಕ್, ಗಂಟೆಗೆ 70 ಕಿ.ಮೀ. ಗರಿಷ್ಠ ವೇಗ, 156 ಕಿ.ಮೀ.ಗಳ (IDC) ಸುಧಾರಿತ ರೇಂಜ್ ಮತ್ತು ಹೆಚ್ಚಿನ ಪಿಕ್-ಅಪ್ ಇದರ ಪ್ರಮುಖ ಆಕರ್ಷಣೆಗಳಾಗಿವೆ. ಈ ಸ್ಕೂಟರ್ ಬ್ಲೇಜ್ ರೆಡ್, ಪಿಯಾನೋ ಬ್ಲ್ಯಾಕ್ ಮತ್ತು ವೋಲ್ಟ್ ಬ್ಲೂ ಎಂಬ ಮೂರು ಆಕರ್ಷಕ ಬಣ್ಣಗಳಲ್ಲಿ ಲಭ್ಯವಿದೆ. ಸುರಕ್ಷತೆ, ವಿಶ್ವಾಸಾರ್ಹತೆ ಮತ್ತು ಬಾಳಿಕೆಯ ತತ್ವಗಳನ್ನು ಒಳಗೊಂಡಿರುವ ಈ ವಾಹನಗಳು ಗ್ರಾಹಕರ ವಿವಿಧ ಅಗತ್ಯಗಳನ್ನು ಪೂರೈಸಲು ಸೂಕ್ತವಾಗಿವೆ. ಡಿಪ್ಲೋಸ್ ಮ್ಯಾಕ್ಸ್+ ನ ಬೆಂಗಳೂರು ಎಕ್ಸ್-ಶೋರೂಂ ಬೆಲೆ 1,14,999 ರೂಪಾಯಿ.
ಕಂಪನಿಯು ಭಾರತದಲ್ಲೇ ಅತಿದೊಡ್ಡ ಪೈಲಟ್ ಪರೀಕ್ಷೆಯನ್ನು ನಡೆಸಿದ್ದು, ಇದುವರೆಗೂ 14 ಮಿಲಿಯನ್ ಕಿಲೋಮೀಟರ್‌ಗಳಿಗಿಂತ ಹೆಚ್ಚು ದೂರ ಕ್ರಮಿಸಿದೆ. ಇದು ಯಾವುದೇ ಭಾರತೀಯ ವಾಹನ ತಯಾರಕ ಕಂಪನಿ ಮಾಡದ ಸಾಧನೆಯಾಗಿದೆ. ವಿವಿಧ ಭೌಗೋಳಿಕ ಭೂಪ್ರದೇಶಗಳಲ್ಲಿ ಚಲಿಸುವ ಮೂಲಕ, ಡಿಪ್ಲೋಸ್ ಶ್ರೇಣಿಯ ಸ್ಕೂಟರ್‌ಗಳು ಅಸಾಮಾನ್ಯ ಸುರಕ್ಷತೆ, ವಿಶ್ವಾಸಾರ್ಹತೆ ಮತ್ತು ಬಾಳಿಕೆ ಪ್ರದರ್ಶಿಸಿವೆ,
ಡಿಪ್ಲೋಸ್ ಪ್ಲಾಟ್‌ಫಾರ್ಮ್ ಅನ್ನು ಅತ್ಯಾಧುನಿಕ ಎಂಜಿನಿಯರಿಂಗ್ ಮತ್ತು ನವೀನ ವಿನ್ಯಾಸದ ಮೇಲೆ ನಿರ್ಮಿಸಲಾಗಿದೆ. ಇದು ಸಂಪೂರ್ಣವಾಗಿ ಸಂಪರ್ಕಿತ ಮತ್ತು ಸುಗಮ ಬಳಕೆದಾರ ಅನುಭವ ನೀಡುತ್ತದೆ.

ಇದರ ಮೂರು ಪ್ರಮುಖ ತತ್ವಗಳು ಹೀಗಿವೆ:
ಕಾರ್ಯಕ್ಷಮತೆ: 156 ಕಿ.ಮೀ. (IDC) ಸುಧಾರಿತ ರೇಂಜ್ ಮತ್ತು ಗಂಟೆಗೆ 70 ಕಿ.ಮೀ. ಗರಿಷ್ಠ ವೇಗ.
ಸುರಕ್ಷತೆ: ಡ್ಯುಯಲ್ ಡಿಸ್ಕ್ ಬ್ರೇಕ್‌ಗಳು, ಹೈ-ಪರ್ಫಾರ್ಮೆನ್ಸ್ ಎಲ್‌ಇಡಿ ಲೈಟಿಂಗ್, ಮತ್ತು ಕಳ್ಳತನದ ಎಚ್ಚರಿಕೆ, ಜಿಯೋಫೆನ್ಸಿಂಗ್, ಮತ್ತು ವಾಹನ ಟ್ರ್ಯಾಕಿಂಗ್‌ನಂತಹ ಸುಧಾರಿತ ಸ್ಮಾರ್ಟ್ ವೈಶಿಷ್ಟ್ಯಗಳನ್ನು ಒಳಗೊಂಡಿದೆ.
ವಿಶ್ವಾಸಾರ್ಹತೆ: ಚಾಸಿಸ್, ಬ್ಯಾಟರಿ, ಮೋಟಾರ್, ಮತ್ತು ಕಂಟ್ರೋಲರ್‌ನಂತಹ ವ್ಯವಸ್ಥೆಗಳನ್ನು ದೀರ್ಘಕಾಲೀನ ಅತ್ಯುತ್ತಮ ಕಾರ್ಯಕ್ಷಮತೆಗಾಗಿ ವಿನ್ಯಾಸಗೊಳಿಸಲಾಗಿದೆ.

ಬಾಳಿಕೆ: ದೃಢವಾದ ಚೌಕಾಕಾರದ ಚಾಸಿಸ್ ಮತ್ತು ಅಗಲವಾದ ಟೈರ್‌ಗಳು ದೀರ್ಘಕಾಲ ಬಾಳಿಕೆ ಬರುವಂತೆ ವಿನ್ಯಾಸಗೊಳಿಸಲಾಗಿದೆ ಮತ್ತು ವಿವಿಧ ಭೂಪ್ರದೇಶಗಳಲ್ಲಿ ಉತ್ತಮ ಹಿಡಿತವನ್ನು ನೀಡುತ್ತವೆ.
ಸ್ಕೂಟರ್ ಬಿಡುಗಡೆ ಕುರಿತು ಮಾತನಾಡಿದ ನ್ಯುಮೆರೋಸ್ ಮೋಟಾರ್ಸ್‌ನ ಸಂಸ್ಥಾಪಕ ಮತ್ತು ಸಿಇಒ ಶ್ರೀ ಶ್ರೇಯಸ್ ಶಿಬುಲಾಲ್, “ನ್ಯುಮೆರೋಸ್ ಮೋಟಾರ್ಸ್‌ನಲ್ಲಿ, ನಾವು ಸ್ವಚ್ಛ ಮತ್ತು ಸಮರ್ಥ ಚಲನಶೀಲತಾ ಪರಿಹಾರಗಳನ್ನು ಸುಸ್ಥಿರ ಪರಿಸರ ವ್ಯವಸ್ಥೆಗಳ ಅಡಿಪಾಯವೆಂದು ಪರಿಗಣಿಸುತ್ತೇವೆ. ಡಿಪ್ಲೋಸ್ ಪ್ಲಾಟ್‌ಫಾರ್ಮ್ ನಾವೀನ್ಯ, ಸುರಕ್ಷತೆ ಮತ್ತು ಪರಿಸರ ಜವಾಬ್ದಾರಿಗೆ ನಮ್ಮ ಬದ್ಧತೆಯ ದ್ಯೋತಕವಾಗಿದೆ. ಆದ್ದರಿಂದ, ನಾವು ಗ್ರಾಹಕರಿಗೆ ಹೆಚ್ಚಿನ ಮೌಲ್ಯವನ್ನು ನೀಡುವ ಡಿಪ್ಲೋಸ್ ಮ್ಯಾಕ್ಸ್+ ಅನ್ನು ಬಿಡುಗಡೆಗೊಳಿಸಿದ್ದೇವೆ. ಈ ಬಿಡುಗಡೆಯು ಸಾರಿಗೆಯ ಭವಿಷ್ಯವನ್ನು ರೂಪಿಸಲು ಸುಧಾರಿತ ತಂತ್ರಜ್ಞಾನವನ್ನು ಪ್ರಾಯೋಗಿಕ ವಿನ್ಯಾಸದೊಂದಿಗೆ ಸಂಯೋಜಿಸುವ ನಮ್ಮ ಗಮನವನ್ನು ಪ್ರತಿಬಿಂಬಿಸುತ್ತದೆ” ಎಂದರು.
ನ್ಯುಮೆರೋಸ್ ಮೋಟಾರ್ಸ್ ಗ್ರಾಹಕರ ಅನುಕೂಲಕ್ಕಾಗಿ ತನ್ನ ಮಾರಾಟ ಮತ್ತು ಸೇವಾ ಜಾಲವನ್ನು ಸಕ್ರಿಯವಾಗಿ ವಿಸ್ತರಿಸುತ್ತಿದೆ. ಪ್ರಸ್ತುತ, ಇದು 14 ನಗರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, 2026-27ರ ಆರ್ಥಿಕ ವರ್ಷದ ಅಂತ್ಯದ ವೇಳೆಗೆ 50 ನಗರಗಳಲ್ಲಿ ಕನಿಷ್ಠ 100 ಡೀಲರ್‌ಗಳನ್ನು ಹೊಂದುವ ಗುರಿ ಹೊಂದಿದೆ.