ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರರಣದ ಆರೋಪಿಗಳು ಈಗ ಜೈಲು ಪಾಲಾಗಿದ್ದಾರೆ. ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ. ಆರೋಪಿಗಳ ಒಂದೊಂದೆ ಮುಖವಾಡ ಈಗ ಬಯಲಿಗೆ ಬರುತ್ತಿದೆ. ಈ ಮಧ್ಯೆ ಪವಿತ್ರಾಗೌಡ ಸಂಬಂಧದ ಕುರಿತು ದರ್ಶನ್ ಪೊಲೀಸರ ಮುಂದೆ ಬಾಯಿ ಬಿಟ್ಟಿದ್ದಾರೆ ಎನ್ನಲಾಗಿದೆ.
ನಾನು ಪವಿತ್ರಾಗೌಡ ಮದುವೆ ಆಗಿಲ್ಲ. ನಾವಿಬ್ಬರೂ ಲೀವಿಂಗ್ ಟುಗೆದರ್ ನಲ್ಲಿ ಇದ್ದೀವಿ ಎಂದು ದರ್ಶನ್ ವಿಚಾರಣೆ ವೇಳೆ ಹೇಳಿದ್ದಾರೆ ಎನ್ನಲಾಗಿದೆ. ಪವಿತ್ರಾಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದ್ದಕ್ಕೆ ಆತನನ್ನು ಅಪಹರಿಸಿ ಕೊಲೆ ಮಾಡಲಾಗಿತ್ತು. ಹೀಗಾಗಿಯೇ ಈಗ ಈ ಪ್ರಕರಣದಲ್ಲಿ ನಟ ದರ್ಶನ್ ಗ್ಯಾಂಗ್ ಕಂಬಿ ಎಣಿಸುತ್ತಿದೆ.
ಖುದ್ದು ಡಿಸಿಪಿಯಿಂದಲೇ ವಿಚಾರಣೆ ನಡೆದಾಗ ನಟ ದರ್ಶನ್ ತನ್ನ ಹಾಗೂ ಪವಿತ್ರಗೌಡ ಮಧ್ಯೆದ ಸಂಬಂಧದ ಕುರಿತು ಮಾತನಾಡಿದ್ದಾರೆ. ನಾನು ಪವಿತ್ರಾಗೌಡ ಮದುವೆ ಆಗಿಲ್ಲ. ಆದರೆ ಇಬ್ಬರು ಜತೆಯಲ್ಲಿ ಇದ್ದೀವಿ ಎಂದಿದ್ದಾರೆ. ಚಾರ್ಜ್ ಶೀಟ್ ನಲ್ಲಿ ಪೊಲೀಸರು ಇಬ್ಬರ ಸಂಬಂಧದ ಬಗ್ಗೆಯೂ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ದರ್ಶನ್ ಪವಿತ್ರಾರನ್ನು ಮದುವೆಯಾಗಿಲ್ಲ, ಲೀವಿಂಗ್ ಟುಗೆದರ್ ನಲ್ಲಿದ್ದರೂ ಎಂಬುವುದು ಈಗ ಬಹಿರಂಗವಾಗಿದೆ.