ಹಾಸನ : ಜೇನುಕಲ್ ಸಿದ್ದೇಶ್ವರ ಸ್ವಾಮಿ ಜಾತ್ರೆಯಿಂದ ವಾಪಸ್ಸಾಗುತ್ತಿದ್ದ ಹಿಂದೂ ದಂಪತಿ ಮೇಲೆ ಅನ್ಯಕೋಮಿನ ಯುವಕರ ಗುಂಪೊಂದು ಹಲ್ಲೆ ಮಾಡಿರುವ ಘಟನೆ ಹಾಸನದ ಅರಸೀಕೆರೆ ನಗರದ ಎಪಿಎಂಸಿ ಎದುರು ನಡೆದಿದೆ.
ನಗರಸಭೆ ಮಾಜಿ ಅಧ್ಯಕ್ಷ ಸಮೀವುಲ್ಲಾ ಪುತ್ರ, ಸುಫಿಯಾನ್ ಸಮೀವುಲ್ಲಾ ಹಾಗೂ ಆತನ ಬೆಂಬಲಿಗರ ವಿರುದ್ಧ ಹಲ್ಲೆ ಆರೋಪ ಕೇಳಿ ಬಂದಿದ್ದು, ಹಿಂದೂ ದಂಪತಿ ಮೇಲೆ ಹಲ್ಲೆ ಮಾಡಿರೋ ವಿಡಿಯೋ ಇದೀಗ ವೈರಲ್ ಆಗಿದೆ.
ಆಗಿದ್ದೇನು?
ಬೈಕ್‌ನಲ್ಲಿ ತೆರಳುತ್ತಿದ್ದ ಹಿಂದೂ ದಂಪತಿಗೆ ಫ್ಯಾಮಿಲಿ ಇರುವಾಗ ನಿಧಾನವಾಗಿ ಬೈಕ್ ಓಡಿಸು ಎಂದು ಅನ್ಯಕೋಮಿನ ಗುಂಪೊಂದು ಹೇಳಿದೆ. ಅಷ್ಟಕ್ಕೆ ಸಿಟ್ಟಿಗೆದ್ದ ವ್ಯಕ್ತಿ ʼನಿಧಾನವಾಗಿ ಹೋಗ್ತಿದ್ದೀನಿ ನನಗ್ಯಾಕೆ ಹೇಳ್ತಿರʼ ಎಂದು ಪ್ರಶ್ನಿಸಿದ್ದಾನೆ. ಈ ವೇಳೆ ಮಾತಿಗೆ ಮಾತು ಬೆಳೆದು ಗಲಾಟೆ ನಡೆದಿದೆ. ಬಳಿಕ ಪತ್ನಿ ಗಂಡನನ್ನು ಸಮಾಧಾನ ಮಾಡುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.
ವಿಡಿಯೋ ಮಾಡುತ್ತಿದ್ದವರಿಗೂ ಸಮೀವುಲ್ಲಾ ಪುತ್ರ, ʼವಿಡಿಯೋ ಮಾಡಿ ಏನ್.. ಕಿತ್ಕೋತಿರೋʼ ಎಂದು ಅವಾಜ್ ಹಾಕಿದ್ದಾನೆ. ಈ ಘಟನೆ ಬಗ್ಗೆ ಇದುವರೆಗೂ ಯಾವುದೇ ದೂರು ದಾಖಲಾಗಿಲ್ಲ. ವಿಡಿಯೋ ವೈರಲ್ ಆದ ಬಳಿಕ ಹಿಂದೂಗಳ ಮೇಲೆ ಮುಸ್ಲಿಂ ದಬ್ಬಾಳಿಕೆ ಎಂದು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಇದನ್ನೂ ಓದಿ : ಕುಂದಾಪುರದಲ್ಲಿ 10-15 ದಿನ ಆದ್ರೂ ಬಾರದ ಗ್ಯಾಸ್.. ಸುಡು ಬಿಸಿಲಲ್ಲಿ ಕ್ಯೂ ನಿಂತ ಜನ


















