ಕಲಬುರಗಿ : ಗುಲ್ಬರ್ಗ ಜಿಲ್ಲೆಯ ವಿಶ್ವ ವಿದ್ಯಾಲದಯದ ಬಿ.ಇಡಿ ವಿದ್ಯಾರ್ಥಿಗಳಿಗೆ ಇನ್ನೂ ಫಲಿತಾಂಶ ನೀಡಿಲ್ಲ ಎಂದು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದು, ವಿಶ್ವ ವಿದ್ಯಾಲದಯವು ತಮ್ಮ ಜೀವನದ ಜೊತೆ ಚೆಲ್ಲಾಟ ಆಡುತ್ತಿದೆ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕನಸನ್ನು ಹೊತ್ತು ಬಹಳಷ್ಟು ವಿದ್ಯಾರ್ಥಿಗಳು ಬಿ.ಇಡಿ ವೃತ್ತಿ ಶಿಕ್ಷಣವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಆದ್ರೀಗ ಪ್ರಶಿಕ್ಷಣಾರ್ಥಿಗಳು ಪರೀಕ್ಷೆ ಬರೆದು ಫಲಿತಾಂಶ ಮತ್ತು ಅಂಕಪಟ್ಟಿಗಾಗಿ ಜಾತಕ ಪಕ್ಷಿಯಂತೆ ಕಾಯುವ ಸ್ಥಿತಿ ಬಂದಿದೆ.
ಪದವಿ, ಸ್ನಾತಕೋತ್ತರ ಪದವಿ, ವೃತ್ತಿಪರ ಪರೀಕ್ಷೆ ತೆಗೆದುಕೊಂಡರೂ 45 ದಿನದ ಒಳಗಾಗಿ ಫಲಿತಾಂಶ ಪ್ರಕಟಿಸಬೇಕೆಂದು ನಿಯಮವಿದೆ. ಆದರೆ ಈ ನಿಯಮವನ್ನು ಕಲಬುರಗಿ ವಿಶ್ವವಿದ್ಯಾಲಯವು ಗಾಳಿಗೆ ತೂರಿದೆ.
ಫಲಿತಾಂಶ ಪ್ರಕಟಿಸುವುದಾಗಿ 13 ಜೂನ್ 2025 ರಂದು ಕಲಬುರಗಿ ವಿಶ್ವವಿದ್ಯಾಲಯದ ಕಾರ್ಯಸೌಧದ ಎದುರುಗಡೆ ಹೋರಾಟವನ್ನು ಮಾಡಿ ಮನವಿಯನ್ನು ಸಲ್ಲಿಸಿದ್ದೇವೆ. ಅಂದು ಮಾನ್ಯ ಕುಲಪತಿಗಳು ಹಾಗೂ ಮಾನ್ಯ ಕುಲಸಚಿವರು ತಿಂಗಳ ಒಳಗಾಗಿ ಭರವಸೆಯನ್ನು ನೀಡಿದ್ದರು. ಆದ್ರೆ ಐದು ತಿಂಗಳಾದರೂ ಸಹ ಫಲಿತಾಂಶ ಪ್ರಕಟಿಸಿಲ್ಲ, ಈಗಾಗಲೇ ಕರ್ನಾಟಕ ಸರ್ಕಾರವು ಶಿಕ್ಷಕರ ಅರ್ಹತಾ ಪರೀಕ್ಷೆ(TET) ಅರ್ಜಿ ಸಲ್ಲಿಕೆ ಪ್ರಾರಂಭಿಸಿದ್ದು, ಫಲಿತಾಂಶ ಘೋಷಣೆ ವಿಳಂಬ ನೀತಿಯಿಂದಾಗಿ ಅನರ್ಹ ಶಿಕ್ಷಕರಾಗಿ ಉಳಿದಿದ್ದಾರೆ.
ಭವಿಷ್ಯದಲ್ಲಿ ಕರ್ನಾಟಕ ಸರ್ಕಾರವು ಶೀಘ್ರವಾಗಿ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಆರಂಭವಾಗುವ ಸಾಧ್ಯತೆಯಿದೆ. ಫಲಿತಾಂಶ ಬಾರದೆ ಇದ್ದರೆ, ಬಿ.ಇಡಿ ವೃತ್ತಿ ಶಿಕ್ಷಣ ಪಡೆದು ಶಿಕ್ಷಕರಾಗಲು ಆಕಾಂಕ್ಷೆಗಳನ್ನು ಹೊತ್ತಿರುವ ಸಾವಿರಾರು ಪ್ರಶಿಕ್ಷಣಾರ್ಥಿಗಳ ಕನಸು ನುಚ್ಚು ನೂರಾಗುವುದರಲ್ಲಿ ಸಂದೇಹವಿಲ್ಲ. ಅದರಲ್ಲೂ ವಿಶೇಷವಾಗಿ ಕರ್ನಾಟಕ ಸರ್ಕಾರ ನಿಗದಿ ಪಡಿಸಿದ ವಯೋಮಿತಿಯನ್ನು ಮೀರುವ ಆತಂಕದಲ್ಲಿರುವ ಪ್ರಶಿಕ್ಷಣಾರ್ಥಿಗಳು ಸಹ ಫಲಿತಾಂಶ ನಿರೀಕ್ಷೆಯಲ್ಲಿ ಇದ್ದಾರೆ. ಆದ್ದರಿಂದ ಬಿ.ಇಡಿ. ವಿದ್ಯಾರ್ಥಿಗಳ ಫಲಿತಾಂಶ ಪ್ರಕಟಿಸಿ, ಮೂಲ ಅಂಕಪಟ್ಟಿ ಮತ್ತು convocation certificate (ಘಟಿಕೋತ್ಸವ ಪ್ರಮಾಣ ಪತ್ರ) ಕೂಡಲೇ ನೀಡಬೇಕೆಂದು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.
ನಮ್ಮ ಬೇಡಿಕೆಯನ್ನು ಸ್ಪಂದಿಸದೇ ಇದ್ದಲ್ಲಿ ಮುಂದಿನ ಹೋರಾಟಕ್ಕೆ ಸರಕಾರವೇ ಜವಾಬ್ದಾರಿ ಹೊರಲಿದೆ ಎಂಬ ವಿಷಯವನ್ನು ತಮ್ಮ ಆದ್ಯ ಗಮನಕ್ಕೆ ತರಬಯಸುತ್ತೇವೆ ಕೂಡಲೇ ನಮ್ಮ ಬೇಡಿಕೆಯನ್ನು ಈಡೇರಿಸಬೇಕೆಂದು ತಮ್ಮಲ್ಲಿ ಬಿ.ಎಡ್. ವಿದ್ಯಾರ್ಥಿಗಳ ಹೋರಾಟ ಸಮಿತಿ ಮೂಲಕ ಮನವಿ ಮಾಡಿಕೊಳ್ಳಲಾಗಿದೆ.
ವಿದ್ಯಾರ್ಥಿಗಳ ಕೋರಿಕೆ
1. ಬಿ.ಇಡಿ 2024-25ನೇ ಸಾಲಿನ ನಾಲ್ಕನೇ ಹಾಗೂ ಎರಡನೇ ಸೆಮಿಸ್ಟರ್ ಫಲಿತಾಂಶ ಕೂಡಲೆ ಪ್ರಕಟಿಸಬೇಕು.
2. ಎಲ್ಲ ಸೆಮಿಸ್ಟರಗಳ ಮೂಲ ಅಂಕಪಟ್ಟಿ ವಿತರಿಸಬೇಕು.
3. ಘಟಿಕೋತ್ಸವ ಪ್ರಮಾಣ ಪತ್ರ ನೀಡಬೇಕು.
4. ಬಿ.ಇಡಿ ಪರೀಕ್ಷಾ ಶುಲ್ಕ (Eligibility Fees) ಕಡಿಮೆ ಮಾಡಬೇಕು ಎಂದು ಪ್ರತಿ ಭಟನೆ ಮಾಡಿದರು
ಇದನ್ನೂ ಓದಿ : ರಾಜ್ಯದ ಜನರ ಪಾಲಿಗೆ ಸರ್ಕಾರ ಬದುಕಿಲ್ಲ |ಶೋಭಾ ಕರಂದ್ಲಾಜೆ ಆಕ್ರೋಶ



















