ನವದೆಹಲಿ: ಧರ್ಮದ ಆಧಾರದಲ್ಲಿ ಮೀಸಲಾತಿ (Reservation on the basis of religion) ನೀಡಲಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ (Supreme Court) ಹೇಳಿದೆ.
ಪಶ್ಚಿಮ ಬಂಗಾಳದಲ್ಲಿ (West Bengal) 77 ಸಮುದಾಯಗಳನ್ನು (Community) ಹಿಂದುಳಿದ ವರ್ಗಗಳ (OBC) ಪಟ್ಟಿಗೆ ಸೇರಿಸಿರುವುದನ್ನು ಕೋಲ್ಕತ್ತಾ ಹೈಕೋರ್ಟ್ ರದ್ದುಗೊಳಿಸಿತ್ತು. ಇದನ್ನು ಪ್ರಶ್ನಿಸಿ, ಪಶ್ಚಿಮ ಬಂಗಾಳ ಸರ್ಕಾರ ಸುಪ್ರೀಂಗೆ ಮನವಿ ಮಾಡಿತ್ತು. ಈ ವೇಳೆ ಈ ರೀತಿ ಹೇಳಲಾಗಿದೆ.
ವಿಚಾರಣೆಯ ಸಂದರ್ಭದಲ್ಲಿ ನ್ಯಾಯಮೂರ್ತಿಗಳಾದ ಬಿಆರ್ ಗವಾಯಿ ಮತ್ತು ಕೆವಿ ವಿಶ್ವನಾಥನ್ ಅವರಿದ್ದ ಪೀಠಕ್ಕೆ ಹಿರಿಯ ವಕೀಲ ಕಪಿಲ್ ಸಿಬಲ್, ಮೀಸಲಾತಿಯು ಯಾವುದೇ ಧರ್ಮವನ್ನು ಆಧರಿಸಿಲ್ಲ. ಮುಸ್ಲಿಂರನ್ನು ಹಿಂದುಳಿದವರು ಎಂದು ಆಯ್ಕೆ ಮಾಡಿರುವುದು ಅವರಿಗೆ ಮಾಡಿದ ಅವಮಾನ ಎಂಬ ತೀರ್ಪನ್ನು ರದ್ದುಗೊಳಿಸಬೇಕು ಎಂದು ಮನವಿ ಮಾಡಿದರು.
ಕಲ್ಕತ್ತಾ ಹೈಕೋರ್ಟ್‌ನ ಆದೇಶವು, ಪಶ್ಚಿಮ ಬಂಗಾಳ ಸರ್ಕಾರ ನೀಡಿದ ಏಪ್ರಿಲ್, 2010 ಮತ್ತು ಸೆಪ್ಟೆಂಬರ್, 2010 ರ ನಡುವಿನ ಫಲಾನುಭವಿಗಳಿಗೆ ನೀಡಿದ 1.2 ಮಿಲಿಯನ್ ಪ್ರಮಾಣಪತ್ರಗಳನ್ನು ರದ್ದುಗೊಳಿಸಲು ಕಾರಣವಾಗಿದ್ದು, ರಾಜ್ಯದ ಶೇ.28ರಷ್ಟು ಅಲ್ಪಸಂಖ್ಯಾತರ ಜನಸಂಖ್ಯೆಯಲ್ಲಿ ಶೇ.27ರಷ್ಟು ಮುಸ್ಲಿಂರಿದ್ದಾರೆ.
ಮುಸಲ್ಮಾನರಿಗೆ ಶೇ.10ರಷ್ಟು ಮೀಸಲಾತಿ ನೀಡುವ ರಂಗನಾಥ್ ಆಯೋಗದ ಶಿಫಾರಸನ್ನೂ ಸಿಬಲ್ ಅವರು ಉಲ್ಲೇಖಿಸಿದ್ದರು.
ಬಂಗಾಳ ಸರ್ಕಾರವು ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಹೈಕೋರ್ಟ್ ಕಾಯಿದೆಯನ್ನು ರದ್ದುಗೊಳಿಸಿತ್ತು.