ಬೆಂಗಳೂರು: ನಗರದಲ್ಲಿ HMPV ವೈರಸ್ ನ ಎರಡು ಪ್ರಕರಣಗಳು ವರದಿಯಾಗಿದ್ದು, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತುರ್ತು ಸಭೆ ನಡೆಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ವೈರಸ್ ಗೆ ಯಾರೂ ಹೆದರುವ ಅಗತ್ಯವಿಲ್ಲ. ಇದನ್ನು ಮೊದಲ HMPV ವೈರಸ್ ಎಂದು ಕರೆಯಲು ಸಾಧ್ಯವಿಲ್ಲ. ಈಗಾಗಲೇ ವೈರಸ್ ಗಳು ಪತ್ತೆಯಾಗಿದೆ. ಕೋವಿಡ್ ಬಳಿಕ ಚೀನಾದಿಂದ ಈ ವೈರಸ್ ಹರಡುತ್ತಿದೆ ಎಂಬ ಆತಂಕ ಜನರಲ್ಲಿ ಇದೆ. ಇದಕ್ಕೆ ದೊಡ್ಡ ಪ್ರಮಾಣದಲ್ಲಿ ಮನ್ನಣೆ ನೀಡುವ ಅಗತ್ಯವಿಲ್ಲ ಎಂದಿದ್ದಾರೆ.
ಅಲ್ಲದೇ, ಈ ವೈರಸ್ ಮಕ್ಕಳಲ್ಲಿ ಕಂಡು ಬರುವ ಕಾರಣ, ಪೋಷಕರು ಎಚ್ಚರದಿಂದ ಇರಬೇಕು ಎಂದು ದಿನೇಶ್ ಗುಂಡೂರಾವ್ ಕಿವಿ ಮಾತು ಹೇಳಿದ್ದಾರೆ.