ಗೊತ್ತಿದ್ದೂ ಗೊತ್ತಿದ್ದೂ ತಪ್ಪು ಮಾಡಿ ಹೊಡೆಸಿಕೊಳ್ಳುವ ಜಾಯಮಾನ ಪಾಕಿಸ್ತಾನಿಗಳಿಗೆ ಅಭ್ಯಾಸವಾಗಿ ಹೋಗಿದೆ. ಭಾರತವನ್ನು ತಡವಿದರೆ ಉಳಿಗಾಲವಿಲ್ಲ ಎನ್ನುವ ಸತ್ಯದ ಅರಿವಿದ್ದರೂ ಬೆಂಕಿ ಪೊಟ್ಟಣದಷ್ಟು ಗಾತ್ರದ ಪಾಕ್ ಉಗ್ರರನ್ನು ಮುಂದಿಟ್ಟುಕೊಂಡು ಷಡ್ಯಂತ್ರ ಮಾಡುತ್ತಲೇ ಬರುತ್ತಿದೆ. ಇದಕ್ಕೆ ಹೊಸ ಸೇರ್ಪಡೆ ಪಹಲ್ಗಾಮ್.
ಅಮಾಯಕ 26 ಜನರ ಉಸಿರು ನಿಲ್ಲಿಸಿದವರ ವಿಚಾರದಲ್ಲಿ ಯಾವುದೇ ದಯೆ, ದಾಕ್ಷಿಣ್ಯ ಇಲ್ಲವೇ ಇಲ್ಲ. ಹಾಗಂತಾ ಪಾಕಿಸ್ತಾನಕ್ಕೀಗ ತಕ್ಕ ಶಾಸ್ತಿ ಮಾಡಲೇಬೇಕಿದೆ. ಆದರೆ, ಅದಕ್ಕೆ ಭಾರತದ ವೀರ ಸೇನಾನಿಗಳ ಬಲಿದಾನವಾಗಬೇಕಿಲ್ಲ. ಅಣ್ವಸ್ತ್ರ ಬಳಕೆಯೂ ಆಗಬೇಕಿಲ್ಲ. ಆದರೂ ಪಾಕಿಸ್ತಾನವನ್ನು ಸರ್ವನಾಶ ಮಾಡಬಲ್ಲ ದೈತ್ಯ ಶಕ್ತಿಯೊಂದು ಭಾರತದ ಬಳಿಯಿದೆ.
ಹಿಂದೂಸ್ಥಾನದ ಬತ್ತಳಿಕೆಯಲ್ಲಿದೆ ತಾಯಿ ಕಾಳಿ ಅಸ್ತ್ರ
ಇದು ಅಂತಿಂಥಾ ಅಸ್ತ್ರ ಅಲ್ಲವೇ ಅಲ್ಲಾ. ಅಣ್ವಸ್ತ್ರಕ್ಕೇ ಸಡ್ಡುಹೊಡೆಯುವ ಮಹಾ ಪ್ರತಾಪಿ ಅಸ್ತ್ರವೊಂದು ಭಾರತದ ಬತ್ತಳಿಕೆಯಲ್ಲಿದೆ. ಅದು ನಿಜಕ್ಕೂ ಮಹಾ ತಾಯಿ ಕಾಳಿಯ ರೂಪದಲ್ಲಿದ್ದು, ಒಂದೊಮ್ಮೆ ಇದು ಭದ್ರಕಾಳಿಯ ಅವತಾರವೆತ್ತಿದ್ರೆ ಪಾಕ್ ನ ಖೇಲ್ ಖತಂ ದುಕಾನ್ ಬಂದ್ ಅಂತಲೇ ಲೆಕ್ಕ. ಅಷ್ಟು ಶಕ್ತಿಶಾಲಿ ಅಸ್ತ್ರವೊಂದು ಭಾರತದ ಕೈಯಲ್ಲಿರೋ ಅರಿವು ಪಾಕ್ ಗೂ ಇದೆ ಅಂದ್ರೆ ನೀವು ನಂಬಲೇಬೇಕು.
ಭಾರತೀಯ ಸೇನೆಗೆ ಇದೆ ಆ ತಾಯಿ ಕಾಳಿಯ ಶ್ರೀರಕ್ಷೆ
ಇದು ಅಂತಿಂಥಾ ಅಸ್ತ್ರವಲ್ಲವೇ ಅಲ್ಲ..ಖುದ್ದು ಆ ಮಹಾ ತಾಯಿಯ ಹೆಸರನ್ನ ಹೊಂದಿರುವ ಈ ಬ್ರಹ್ಮಾಸ್ತ್ರ ಸಿಡಿದರೆ ಪಾಕ್ ವಿಶ್ವ ಭೂಪಟದಿಂದಲೇ ಸರ್ವನಾಶವಾಗುತ್ತಾ? ನಾವಿವತ್ತು ಹೇಳುತ್ತಿರುವುದು ಭಾರತೀಯ ಸೇನೆಯಯಲ್ಲಿ ಅಡಗಿರುವ ಆ ನಿಗೂಢ ಅಸ್ತ್ರದ ಬಗ್ಗೆ. ಅದು ಬೇರ್ಯಾವುದೂ ಅಲ್ಲ. ಅದೇ ಕಾಳಿ ಅಸ್ತ್ರ. ಶಕ್ತಿ ದೇವತೆ ಕಾಳಿಯ ಹೆಸರನ್ನು ಹೊಂದಿರುವ ಇದರ ವಿಸ್ತೃತ ಹೆಸರು ಕಿಲೋ ಆಂಪಿಯರ್ ಲೈನರ್ ಇಂಜೆಕ್ಟರ್ ಅಂತಾ. ಡಿಆರ್ ಡಿಒ ಮತ್ತು ಬಾಬಾ ಅಟಾಮಿಕ್ ರಿಸರ್ಚ್ ಸೆಂಟರ್ ಜಂಟಿಯಾಗಿ ಸಂಶೋಧಿಸಿರುವ ಮಹಾ ಪ್ರಳಯಕಾರಿ ಅಸ್ತ್ರವೇ ಈ ಕಾಳಿ.
ಸಿಯಾಚಿನ್ ಹಿಮವನ್ನು ನೀರಾಗಿಸುವ ಬಲಶಾಲಿ ಕಾಳಿ
ನೀವೆಲ್ಲಾ ಈ ಸ್ಟಾರ್ ವಾರ್ಸ್ ಎನ್ನುವ ಸಿನಿಮಾವನ್ನು ನೋಡಿರಬಹುದು. ಅದರಲ್ಲಿ ಇರುವಂತಹ ಕಲ್ಪನೆಯನ್ನೇ ಭಾರತ ಕನಸಾಗಿಸಿದೆ. ಭಾರತ ಮತ್ತು ಪಾಕ್ ನಡುವೆ ಮಹಾಗೋಡೆಯಂತೆ ನಿಂತಿರುವ ಹಿಮವನ್ನು ಹೊದ್ದು ನಿಂತಿರುವ ಹಿಮಾಲಯದ ಮಂಜನ್ನೇ ಕರುಗಿಸುವ ಶಕ್ತಿ ಈ ಕಾಳಿಗಿದೆ. 1989ರಲ್ಲೇ ಡಿಆರ್ ಡಿಒ ಮತ್ತು ಬಾಬಾ ಅಟಾಮಿಕ್ ಸಂಸ್ಥೆಗಳು ಜಂಟಿಯಾಗಿ ಶೋಧಿಸಿದ ಈ ಕಾಳಿ ಅಸ್ತ್ರ ಪ್ರಳಯಕಾರಿ ಎಲೆಕ್ಟ್ರಿಕ್ ಬೀಮ್ ಗಳನ್ನು ಹೊಂದಿದೆ.
ಈ ಎಲೆಕ್ಟ್ರಿಕ್ ಬೀಮ್ ಗಳನ್ನು ಹಿಮದಲ್ಲಿ ಅಳವಡಿಸಿದರೆ ಅದು ಎಕ್ಸ್ ರೇ ಕಿರಣಗಳಾಗಿ ಮಾರ್ಪಾಡಾಗುತ್ತೆ. ಅಷ್ಟೇ ಸಿಯಾಚಿನ್ ವ್ಯಾಪ್ತಿಯಲ್ಲಿರುವ ದೈತ್ಯ ಹಿಮ ಬಂಡೆಗಳು ಕರಗಿ ನೀರಾಗುತ್ತವೆ. ಅಷ್ಟೇ ಆ ಪ್ರಳಯಕಾರಿ ಜಲಾಸ್ತ್ರ ಪಾಕ್ ಗೆ ನುಗ್ಗುತ್ತೆ. ನೋಡನೋಡುತ್ತಿದ್ದಂತೆ ಸಂಪೂರ್ಣ ಪಾಕಿಸ್ತಾನ ಜಲಸಮಾಧಿಯಾಗುತ್ತೆ. ರಾವಿ, ಸಿಂಧು, ಚಿನಾಬ್ ನದಿಗಳ ಮೂಲಕ ನುಗ್ಗುವ ಪ್ರವಾಹ, ಪಾಕಿಸ್ತಾನವನ್ನು ವಿಶ್ವ ಭೂಪಟದಿಂದಲೇ ನಿರ್ನಾಮ ಮಾಡುತ್ತೆ.
1989ರಲ್ಲೇ ಕಾಳಿಯ ಪ್ರತಾಪ ಕಂಡಿದೆಯಾ ಪಾಕ್
ಡಿಆರ್ ಡಿಒ ವಿಜ್ಞಾನಿಗಳು ಸೇನೆಗೆ ಅತ್ಯಂತ್ರ ಪ್ರಬಲ ಅಸ್ತ್ರ ಶೋಧಿಸಲು ಮುಂದಾಗಿದ್ರು. ಇದಕ್ಕೆ ಅಂದು ಬಾಬಾ ಅಟಾಮಿಕ್ ಸಂಸ್ಥೆ ಕೂಡಾ ಸಾಥ್ ನೀಡಿತ್ತು. ಇದರ ಫಲವಾಗೇ ಕಾಳಿಯ ಜನ್ಮವಾಗಿದ್ದು. ಅಂದು ಸಿಯಾಚಿನ್ ನಲ್ಲಿ ಗ್ಲೇಷಿಯರ್ ನ ದೈತ್ಯ ಭಾಗವೊಂದು ಪಾಕಿಸ್ತಾನ ಸೇನಾ ಕ್ಯಾಂಪ್ ಮೇಲೆ ಕುಸಿದುಬಿದ್ದಿತ್ತು. ಈ ಅವಘಡದಲ್ಲಿ 140 ಪಾಕ್ ಯೋಧರು ಹಿಮದಡಿ ಶವವಾಗಿದ್ರು.
ಹಾಗಂತಾ ಇದು ಪ್ರಕೃತಿ ಸೃಷ್ಟಿಸಿದ ಅವಾಂತರವಲ್ಲ. ಬದಲಿಗೆ ಭಾರತದ ಕಾಳಿಯ ಸೃಷ್ಟಿ ಮಹಿಮೆಯಾಗಿತ್ತು. 1989ರಲ್ಲಿ ಕಾಳಿಯ ಸಾಮರ್ಥ್ಯ ಪರೀಕ್ಷಿಸಲಾಗಿತ್ತು. ಅಂದು ಸಿಯಾಚಿನ್ ನಲ್ಲಿ ಭಾರತ ನಡೆಸಿದ ಪ್ರಯೋಗದ ಫಲವೇ 140 ಪಾಕಿಗಳು ಹೆಣವಾಗಿದ್ರು. ಅಲ್ಲಿಗೆ ಲೆಕ್ಕ ಹಾಕಿ ಸಣ್ಣದೊಂಡು ಡೋಜ್ ಗೇ ಈ ಪಾಕಿ ಸರ್ವನಾಶ ಸೃಷ್ಟಿಸಿದ್ದ ಕಾಳಿ ಇನ್ನು ಪೂರ್ಣ ಪ್ರಮಾಣದಲ್ಲಿ ಪರೀಕ್ಷೆಗೊಳಪಟ್ರೆ ಪಾಕ್ ಕತೆ ಇನ್ನೇನಾಗಬೇಡ. ಹಾಗಂತಾ ಭಾರತದ ಕೈಯಲ್ಲಿರುವ ಈ ಕಾಳಿ ಅಸ್ತ್ರದ ಬಗ್ಗೆ ಪಾಕ್ ಗೆ ಪರಿಚಯವಿದೆ. ಹೀಗಾಗಿಯೇ ಪಾಪಿ ಧರ್ಮಾಂಧ ದೇಶ ಈಗ ಮೈ ಕೊರೆಯುವ ಚಳಿಯಲ್ಲೂ ಬೆವರಲು ಆರಂಭಿಸದೆ.