ಬೆಂಗಳೂರು: ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರು ಮಂಪರು ಪರೀಕ್ಷೆಗೆ ಒಳಪಡುವುದೇನೂ ಬೇಡ. ನನ್ನ ಜೊತೆಗೆ ಒಂದೇ ವೇದಿಕೆಯಲ್ಲಿ ಚರ್ಚೆಗೆ ಬರಲಿ. ಎಲ್ಲವನ್ನೂ ಅಲ್ಲೇ ತಿಳಿಸುತ್ತೇನೆ ಎಂದು ಶಾಸಕ ಮುನಿರತ್ನ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಪರು ಪರೀಕ್ಷೆಗೆ ಬಹಳ ಸಮಯ ಆಗುತ್ತದೆ. ಅದರ ಬದಲಿಗೆ ಒಂದೇ ವೇದಿಕೆಯಲ್ಲಿ ಚರ್ಚೆಗೆ ಬರಲಿ ಎಂದು ಮುನಿರತ್ನ ಆಹ್ವಾನ ಕೊಟ್ಟಿದ್ದಾರೆ. ಸಚಿವ ಕೆ.ಎನ್.ರಾಜಣ್ಣ ಅವರು ಒಬ್ಬರೇ ಬರುವುದು ಬೇಡ. ಅವರ ಜೊತೆಗೆ ಇತಿಹಾಸಕಾರ ರಮೇಶ್ಕುಮಾರ್ ಹಾಗೂ ಅಶೋಕ್ ಪಟ್ಟಣಶೆಟ್ಟಿ ಕೂಡ ಬರಬೇಕು. ವಿಜಯನಗರ ಸಾಮ್ರಾಜ್ಯದಲ್ಲಿ ಕೃಷ್ಣದೇವರಾಯ ಆಡಳಿತವನ್ನು ನಮಗೆ ತಿಳಿಸಿದವರು ರಾಬರ್ಟ್ ಸೇವಲ್ ಎಂಬಾತ.
ಇಲ್ಲಿ ಹನಿಟ್ರ್ಯಾಪ್ ಪ್ರಕರಣ ಸದ್ದು ಮಾಡುತ್ತಿರುವುದನ್ನು ನೋಡಿದ್ರೆ, ಇಲ್ಲಿನ ಇತಿಹಾಸ ಗೊತ್ತಿರುವುದು ರಮೇಶ್ಕುಮಾರ್ ಹಾಗೂ ಅಶೋಕ್ ಪಟ್ಟಣಶೆಟ್ಟಿಗೆ. ಹೀಗಾಗಿ, ಅವರು ಕೂಡ ಚರ್ಚೆಗೆ ಬರಬೇಕು ಎಂದು ಮುನಿರತ್ನ ತಿಳಿಸಿದ್ದಾರೆ.