ಪಾಕಿಸ್ತಾನಕ್ಕೆ ಎಷ್ಟು ಪೆಟ್ಟು ನೀಡಿದರೂ ಅದಕ್ಕೆ ಬುದ್ಧಿ ಬರುತ್ತಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
25ನೇ ಕಾರ್ಗಿಲ್ ವಿಜಯ್ ದಿವಸದಂದು ಪ್ರಧಾನಿ ಮೋದಿ ಅವರು ಕಾರ್ಗಿಲ್ ಗೆ ಭೇಟಿ ನೀಡಿ ಹುತಾತ್ಮ ಯೋಧರಿಗೆ ಗೌರವ ನಮನ ಸಲ್ಲಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕೇವಲ ನಾವು ಯುದ್ಧ ಗೆದ್ದಿಲ್ಲ, ಸತ್ಯ, ಸಂಯಮ, ಹಾಗೂ ಸಾಮರ್ಥ್ಯದ ಅದ್ಭುತ ಪರಿಚಯವನ್ನು ವಿರೋಧಿಗಳಿಗೆ ಮಾಡಿಕೊಟ್ಟಿದ್ದೇವೆ. ಹಿಂದಿನ ಸಮಯದಲ್ಲಿ ಭಾರತ ಶಾಂತಿಗಾಗಿ ಪ್ರಯತ್ನಿಸುತ್ತಿತ್ತು ಎಂಬುವುದು ಎಲ್ಲರಿಗೂ ಗೊತ್ತಿದೆ. ಹಿಂದೆ ಪಾಕಿಸ್ತಾನ ಏನೇ ಪ್ರಯತ್ನ ಮಾಡಿದರೂ ಸೋಲನ್ನೇ ಅದು ಎದುರಿಸಬೇಕಾಯಿತು. ಕಾಶ್ಮೀರದಲ್ಲಿ 370ನೇ ವಿಧಿ ರದ್ದು ಮಾಡಲಾಗಿದೆ. ಇಂದು ಕಾಶ್ಮೀರ ದೊಡ್ಡ ಕನಸುಗಳ ಬಗ್ಗೆ ಮಾತನಾಡುತ್ತಿದೆ ಎಂದು ಹೇಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಸಿನಿಮಾ ತೆರೆಕಂಡು ತಜಿಯಾ ತೆರೆಗೆ ಬಂದಿದೆ. ಲಡಾಖ್‌ನಲ್ಲಿಯೂ ಅಭಿವೃದ್ಧಿಯ ಹೊಸ ಹೊಳೆ ಸೃಷ್ಟಿಯಾಗಿದೆ. ಕಳೆದ 5 ವರ್ಷಗಳಲ್ಲಿ, ನಾವು ಲಡಾಖ್‌ನ ಬಜೆಟ್ ಅನ್ನು 1100 ಕೋಟಿಯಿಂದ 6 ಸಾವಿರ ಕೋಟಿಗೆ ಹೆಚ್ಚಿಸಿದ್ದೇವೆ. ಅಂದರೆ ಸುಮಾರು 6 ಪಟ್ಟು ಹೆಚ್ಚಳವಾಗಿದೆ. ಈ ಹಣವನ್ನು ಲಡಾಖ್‌ನ ಜನರ ಅಭಿವೃದ್ಧಿಗೆ ಬಳಸಲಾಗುತ್ತಿದೆ. ರಸ್ತೆಗಳು, ವಿದ್ಯುತ್, ನೀರು, ಶಿಕ್ಷಣ, ವಿದ್ಯುತ್ ಪೂರೈಕೆ, ಉದ್ಯೋಗ ಲಡಾಖ್‌ನ ಪ್ರತಿಯೊಂದು ದಿಕ್ಕಿನಲ್ಲೂ ದೃಶ್ಯ ಮತ್ತು ಸನ್ನಿವೇಶವು ಬದಲಾಗುತ್ತಿದೆ ಎಂದು ಹೇಳಿದ್ದಾರೆ.