ಬೆಂಗಳೂರು: ಕೇಂದ್ರ ಸರ್ಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುವ, ಕಬ್ಬಿಣದ ಅದಿರು ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಎನ್ ಎಂ ಡಿ ಸಿ ಲಿಮಿಟೆಡ್ (NMDC Limited) ಸಂಸ್ಥೆಯಲ್ಲಿ 995 ಹುದ್ದೆಗಳು ಖಾಲಿ ಇವೆ. ಹುದ್ದೆಗಳ ಭರ್ತಿಗಾಗಿ ಅಧಿಸೂಚನೆ ಹೊರಡಿಸಲಾಗಿದೆ. ಕರ್ನಾಟಕ ಸೇರಿ ದೇಶದ ಹಲವೆಡೆ ಕಾರ್ಯನಿರ್ವಹಿಸಲು ಇಚ್ಛಿಸುವವರು https://www.nmdc.co.in/ ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
ಜನರಲ್, ಒಬಿಸಿಯವರಿಗೆ 150 ರೂಪಾಯಿ ಅರ್ಜಿ ಶುಲ್ಕವಿದೆ. ಎಸ್ಸಿ, ಎಸ್ಟಿಯವರಿಗೆ ಅರ್ಜಿ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ. ಅರ್ಜಿ ಸಲ್ಲಿಸಲು ಜೂನ್ 14 ಕೊನೆಯ ದಿನವಾಗಿದೆ. ಆಯಾ ಹುದ್ದೆಗಳಿಗೆ ಅನುಗುಣವಾಗಿ ವಿದ್ಯಾರ್ಹತೆ ಹಾಗೂ ಸಂಬಳವನ್ನು ನಿಗದಿಪಡಿಸಲಾಗಿದೆ. ಆನ್ ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
ಯಾವ ಹುದ್ದೆ ಎಷ್ಟು ಖಾಲಿ?
ಫೀಲ್ಡ್ ಅಡೆಂಡೆಂಟ್ (Trainee) 151
ಮೆಂಟೇನನ್ಸ್ ಅಸಿಸ್ಟಂಟ್ (Elect.) (Trainee) 141
ಮೆಂಟೇನನ್ಸ್ ಅಸಿಸ್ಟಂಟ್ (Mech) (Trainee) 305
ಬ್ಲಾಸ್ಟರ್ ಜಿಆರ್- II (Trainee) 6
ಎಲೆಕ್ಟ್ರಿಷಿಯನ್ ಜಿಆರ್ -III (Trainee) 41
ಎಲೆಕ್ಟ್ರಾನಿಕ್ಸ್ ಜಿಆರ್ -III (Trainee) 06
ಎಚ್ ಇ ಎಂ ಮೆಕ್ಯಾನಿಕ್ ಜಿಆರ್-III (Trainee) 77
ಎಚ್ ಇ ಎಂ ಆಪರೇಟರ್ ಜಿಆರ್ -III (Trainee) 228
ಎಂಸಿಒ ಜಿಆರ್ -III (Trainee) 36
ಐಟಿಐ, ಡಿಪ್ಲೋಮಾ ಇನ್ ಎಂಜಿನಿಯರಿಂಗ್, ಡಿಪ್ಲೋಮಾ ಇನ್ ಮೆಕ್ಯಾನಿಕಲ್ ಎಂಜಿನಿಯರಿಂಗ್, ಬಿಎಸ್ಸಿ ಸೇರಿ ಹಲವು ಕೋರ್ಸ್ ಗಳನ್ನು ಮುಗಿಸಿದವರಿಗೆ ಒಳ್ಳೆಯ ಅವಕಾಶಗಳಿವೆ. 30 ವರ್ಷದೊಳಗಿನವರು ಅರ್ಜಿ ಸಲ್ಲಿಸಬಹುದಾಗಿದೆ. ಕರ್ನಾಟಕದ ಬಳ್ಳಾರಿ ಹಾಗೂ ಛತ್ತೀಸ್ ಗಢದಲ್ಲಿರುವ ಕಬ್ಬಿಣದ ಅದಿರು ಗಣಿಗಳಲ್ಲಿ ಕೆಲಸ ಮಾಡಲು ಇಚ್ಛಿಸುವವರು ಅರ್ಜಿ ಸಲ್ಲಿಸಬಹುದಾಗಿದೆ.