ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಡಿವೋರ್ಸ್ ಪಡೆದಿದ್ದಾರೆ. ಡಿವೋರ್ಸ್ ಸಿಕ್ಕ ನಂತರ ಇಬ್ಬರೂ ಸಂತೋಷವಾಗಿಯೇ ಇದ್ದಾರೆ. ಈಗ ನಿವೇದಿತಾ ಅವರ ರೀಲ್ಸ್ ವಿಡಿಯೋ ರಿವೀಲ್ ಆಗುತ್ತಿವೆ.
ನಿವೇದಿತಾ ಗೌಡ ಬಾತ್ ರೂಮ್ ನಲ್ಲಿಯೇ ರೀಲ್ಸ್ ಮಾಡುತ್ತಾರಂತೆ. ಪ್ರತಿ ಬಾರಿ ಕೂಡ ವಿಡಿಯೋಗಳನ್ನು ಬಾತ್ ರೂಮಿನಲ್ಲಿ ಯಾಕೆ ಮಾಡ್ತೀರಿ ಅಂತ ನಿವಿ ಫ್ಯಾನ್ಸ್ ಕಮೆಂಟ್ ಮಾಡುತ್ತಿದ್ದಾರೆ. ಇನ್ನು ಸಾಕಷ್ಟು ಜನ ನಟಿಯರು ಈ ರೀತಿಯಾಗಿ ಸೊಂಟ ಬಳುಕಿಸಿದರೆ ಸಾಕು ವೀಕ್ಷಿಸುವವರ ಸಂಖ್ಯೆ ಹೆಚ್ಚಾಗುತ್ತದೆ ಎಂದು ನೆಟ್ಟಿಗರು ಆಗಾಗ ಹೇಳುತ್ತಿದ್ದಾರೆ.
ಇತ್ತೀಚೆಗೆ ನಿವೇದಿತಾ ಗೌಡ ರೀಲ್ಸ್ ಮಾಡಿ ಆಗಾಗ ಟ್ರೋಲ್ ಆಗುತ್ತಿದ್ದಾರೆ. ನಿವೇದಿತಾ ಗೌಡ ರೀಲ್ಸ್ ಯಾವತ್ತೂ ಮಾದಕವಾಗಿಯೇ ಇರುತ್ತೆ. ಎಲ್ಲೆ ಮೀರಿ ಹೋಗಿರುತ್ತೆ. ನಾಲ್ಕು ಗೋಡೆಯ ಮಧ್ಯೆ ಬಾತ್ ರೂಮ್ ನಲ್ಲಿ ಕಾಮನ್ ಆಗಿ ರೀಲ್ಸ್ ಮಾಡಿ ವೀಡಿಯೋಗಳು ಶೇರ್ ಮಾಡುತ್ತಿರುತ್ತಾರೆ ನಿವೇದಿತಾಗೌಡ.
ನಿವೇದಿತಾ ಗೌಡ ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಬಹಳ ಆಕ್ಟಿವ್ ಆಗಿರುವ ಬೆಡಗಿ. ಮುದ್ದು ಮುದ್ದಾಗಿ ಮಾತನಾಡುತ್ತಾ ಎಲ್ಲರ ಮನಸ್ಸು ಸೆಳೆಯುತ್ತಿರುವ ಚೆಲುವೆ ಇದೀಗ ಮತ್ತೊಮ್ಮೆ ರೀಲ್ಸ್ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಆಗ ತನ್ನ ಸಪೋರ್ಟ್ ಗೆ ಬಂದ ತಂದೆಯ ಬಗ್ಗೆ ಗುಣಗಾನ ಮಾಡಿದ್ದಾರೆ. ಆ ಕಾರಣಕ್ಕೆ ನಾನು ಇಲ್ಲಿ ಇರಲು ಸಾಧ್ಯ ಹಾಗೆಯೇ ತನ್ನ ಅಭಿಮಾನಿಗಳ ಮನರಂಜನೆ ನೀಡಲು ಸಾಧ್ಯ ಎನ್ನುವ ಮಾತನ್ನು ನಿವೇದಿತಾ ಗೌಡ ಹೇಳಿಕೊಂಡಿದ್ದಾರೆ. ಅನೇಕ ಜನರು ನಿವೇದಿತಾ ಗೌಡಗೆ ಬಹಳಷ್ಟು ನಿಂದನೆ ಮಾಡಿದ್ದರು. ಚಂದನ್ ಶೆಟ್ಟಿ ಜೊತೆಗೆ ವಿಚ್ಛೇದನ ಆದಾಗಲೂ ನಿವೇದಿತಾ ಗೌಡ ಹೆಚ್ಚಾಗಿ ಟ್ರೋಲ್ ಗೆ ಒಳಗಾಗಿದ್ದರು.
ನಿವೇದಿತಾ ಗೌಡ ರೀಲ್ಸ್ ನೋಡಿ ಅಭಿಮಾನಿಗಳು ಸಖತ್ ಖುಷಿ ವ್ಯಕ್ತಪಡಿಸಿದ್ದಾರೆ. ಹಾಗೆಯೇ ಸಾಕಷ್ಟು ಜನ ಸೋ ಕ್ಯೂಟ್, ಸೂಪರ್ , ಬಾತ್ ರೂಮ್ ಸ್ಟಾರ್ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನು ಸಾಕಷ್ಟು ಜನರು ಲೈಕ್ ಮಾಡುತ್ತಿದ್ದಾರೆ. ನಿವೇದಿತಾ ಗೌಡ ಹೆಚ್ಚಾಗಿ ಬಾತ್ ರೂಂನಲ್ಲಿ ರೀಲ್ಸ್ ಮಾಡುವುದನ್ನು ನೋಡಿ ಅಭಿಮಾನಿಗಳು ಬಹಳಷ್ಟು ಖುಷಿ ವ್ಯಕ್ತ ಪಡಿಸಿದ್ದಾರೆ.



















