ಫೆಬ್ರವರಿ 03,2025: ನಿಸ್ಸಾನ್ ಮೋಟಾರ್ ಇಂಡಿಯಾ 2024ರ ಅಕ್ಟೋಬರ್ ನಲ್ಲಿ ಹೊಸ ನಿಸ್ಸಾನ್ ಮ್ಯಾಗ್ನೈಟ್ ಬಿ-ಎಸ್‌ಯುವಿ ಅನ್ನು ಬಿಡುಗಡೆ ಮಾಡಿದ್ದು, ಇದೀಗ ಜಾಗತಿಕ ಮಾರುಕಟ್ಟೆಗಳಿಗೆ ಮ್ಯಾಗ್ನೈಟ್ ನ ಲೆಫ್ಟ್-ಹ್ಯಾಂಡ್ ಡ್ರೈವ್ (ಎಲ್‌ಎಚ್‌ಡಿ) ಕಾರುಗಳ ರಫ್ತು ಆರಂಭಿಸಿದೆ. 2025ರ ಜನವರಿ ಕೊನೆಯ ಭಾಗದಲ್ಲಿ ಚೆನ್ನೈನ ಕಾಮರಾಜರ್ ಬಂದರಿನಿಂದ ಎಲ್ಎಟಿಎಎಂ ಪ್ರದೇಶಕ್ಕೆ ಹೊಸ ನಿಸ್ಸಾನ್ ಮ್ಯಾಗ್ನೈಟ್ ನ 2,900 ಯುನಿಟ್ ಗಳನ್ನು ರಫ್ತು ಮಾಡಲಾಗಿದೆ.
ಫೆಬ್ರವರಿ ತಿಂಗಳಲ್ಲಿ ಮಧ್ಯಪ್ರಾಚ್ಯ, ಉತ್ತರ ಆಫ್ರಿಕಾದ ಮಾರುಕಟ್ಟೆ, ಎಲ್ಎಟಿಎಎಂ ಮತ್ತು ಏಷ್ಯಾ ಪೆಸಿಫಿಕ್ ಪ್ರದೇಶದ ಆಯ್ದ ಮಾರುಕಟ್ಟೆಗಳಿಗೆ ಹೊಸ 7,100 ಯುನಿಟ್ ಗಳನ್ನು ರಫ್ತು ಮಾಡಲಾಗುತ್ತಿದೆ. ಫೆಬ್ರವರಿ ಮಾಸಾಂತ್ಯಕ್ಕೆ ಒಟ್ಟು 10000ಕ್ಕೂ ಹೆಚ್ಚು ಲೆಫ್ಟ್ ಹ್ಯಾಂಡ್ ಡ್ರೈವ್ ಕಾರುಗಳನ್ನು ನಿಸ್ಸಾನ್ ರಫ್ತು ಮಾಡಲಿದೆ.
ಚೆನ್ನೈನಲ್ಲಿರುವ ನಿಸ್ಸಾನ್ ನ ಅಲಯನ್ಸ್ ಜೆವಿ ಘಟಕದಲ್ಲಿ ಹೊಸ ನಿಸ್ಸಾನ್ ಮ್ಯಾಗ್ನೈಟ್ ಅನ್ನು ತಯಾರಿಸಲಾಗುತ್ತಿದ್ದು, ಜಗತ್ತಿನ 65ಕ್ಕೂ ಹೆಚ್ಚು ಆರ್‌ಎಚ್‌ಡಿ (ರೈಟ್-ಹ್ಯಾಂಡ್ ಡ್ರೈವ್) ಮತ್ತು ಎಲ್‌ಎಚ್‌ಡಿ (ಲೆಫ್ಟ್-ಹ್ಯಾಂಡ್ ಡ್ರೈವ್) ಮಾರುಕಟ್ಟೆಗಳಿಗೆ ರಫ್ತು ಮಾಡಲಾಗುತ್ತಿದೆ.
ಈ ಕುರಿತು ಮಾತನಾಡಿದ ಎಎಂಐಇಓ ಪ್ರದೇಶದ ಬಿಸಿನೆಸ್ ಟ್ರಾನ್ಸ್ ಫಾರ್ಮೇಶನ್ ನ ವಿಭಾಗೀಯ ಉಪಾಧ್ಯಕ್ಷ ಮತ್ತು ನಿಸ್ಸಾನ್ ಇಂಡಿಯಾ ಕಾರ್ಯಾಚರಣೆಗಳ ಅಧ್ಯಕ್ಷ ಫ್ರಾಂಕ್ ಟೊರೆಸ್, “ನಿಸ್ಸಾನ್ ಮೋಟಾರ್ ಇಂಡಿಯಾ ದೇಶೀಯ ಮಾರುಕಟ್ಟೆಯಲ್ಲಿ ಮಾತ್ರವಲ್ಲದೆ ಜಾಗತಿಕ ಮಾರುಕಟ್ಟೆಯಲ್ಲಿಯೂ ತನ್ನ ಮಾರುಕಟ್ಟೆ ವಿಸ್ತರಣೆಗೆ ಶ್ರಮಿಸುತ್ತಿದೆ. ಕಳೆದ ವರ್ಷ ಘೋಷಿಸಲಾದ ನಮ್ಮ ರಫ್ತು ಯೋಜನೆಗಳಿಗೆ ಅನುಗುಣವಾಗಿ ಹೊಸ ನಿಸ್ಸಾನ್ ಮ್ಯಾಗ್ನೈಟ್ ನ ಲೆಫ್ಟ್ ಹ್ಯಾಂಡ್ ಡ್ರೈವ್ (ಎಲ್‌ಎಚ್‌ಡಿ) ಕಾರುಗಳನ್ನು ರಫ್ತು ಮಾಡಲು ನಾವು ಸಂತೋಷ ಪಡುತ್ತೇವೆ” ಎಂದು ಹೇಳಿದರು.
ನಿಸ್ಸಾನ್ ಮೋಟಾರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಸೌರಭ್ ವತ್ಸಾ ಅವರು, “ಹೊಸ ನಿಸ್ಸಾನ್ ಮ್ಯಾಗ್ನೈಟ್ ಲೆಫ್ಟ್ ಹ್ಯಾಂಡ್ ವೇರಿಯಂಟ್ ನ ರಫ್ತು ಪ್ರಾರಂಭವಾಗಿರುವುದು ನಮಗೆ ಹೆಮ್ಮೆಯ ಕ್ಷಣವಾಗಿದೆ. ‘ಮೇಕ್ ಇನ್ ಇಂಡಿಯಾ, ಮೇಕ್ ಫಾರ್ ದಿ ವರ್ಲ್ಡ್’ ಎಂಬ ನಮ್ಮ ಉದ್ದೇಶಕ್ಕೆ ಪೂರಕವಾಗಿ ರಫ್ತು ಆರಂಭವಾಗಿದೆ” ಎಂದು ಹೇಳಿದರು.
ರೆನಾಲ್ಟ್ ನಿಸ್ಸಾನ್ ಅಟೋಮೋಟಿವ್ ಇಂಡಿಯಾ ಪೈವೇಟ್ ಲಿಮಿಟೆಡ್ ನ ವ್ಯವಸ್ಥಾಪಕ ನಿರ್ದೇಶಕ ಕೀರ್ತಿ ಪ್ರಕಾಶ್ ಅವರು, “ಹೊಸ ನಿಸ್ಸಾನ್ ಮ್ಯಾಗ್ನೈಟ್ ನ ಲೆಫ್ಟ್-ಹ್ಯಾಂಡ್ ಡ್ರೈವ್ ವೇರಿಯೆಂಟ್ ನ ಉತ್ಪಾದನೆ ಮತ್ತು ರಫ್ತು ಯಶಸ್ವಿಯಾಗಿರುವುದು ಚೆನ್ನೈನ ವಿಶ್ವ ದರ್ಜೆಯ ಉತ್ಪಾದನಾ ಘಟಕಕ್ಕೆ ದೊರೆತ ಗೆಲುವಾಗಿದೆ” ಎಂದು ಹೇಳಿದರು.