ಡಿ ಕೆ. ಶಿವಕುಮಾರ್ ಸಿಎಂ ಆಗಬೇಕು. ಅವರು ಸಿಎಂ ಆಗಬೇಕೆಂಬ ಹಂಬಳ ಬಹಳ ದಿನಗಳಿಂದಿದೆ. ಬರೀ ಒಕ್ಕಲಿಗರಲ್ಲದೇ ಅವರ ಎಲ್ಲಾ ಅಭಿಮಾನಿಗಳ ಅಭಿಪ್ರಾಯ ಅವರು ಸಿಎಂ ಆಗಬೇಕೆಂಬುವುದಾಗಿದೆ ಎಂದು ಡಿಕೆಶಿ ವಿಶ್ವ ಒಕ್ಕಲಿಗರ ಮಠದ ನಿಶ್ವಲಾನಂದ ಸ್ವಾಮಿ ಬ್ಯಾಟ್ ಬೀಸಿದ್ದಾರೆ.
ಮಂಡ್ಯದಲ್ಲಿ ವರದಿಗಾರರಿಗೆ ಸ್ಪಂದಿಸಿದ ಅವರು, ಪಕ್ಷ 135 ಸೀಟ್ ಬರಲು ಸಾಕಷ್ಟು ಶ್ರಮಿಸಿದ್ದಾರೆ. ಕಾಂಗ್ರೆಸ್ ಈ ಮಟ್ಟಕ್ಕೆ ಬರಲು ಅವರು ಕಾರಣಕರ್ತರಾಗಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ತಾಯಿಯಂತೆ ಪ್ರೀತಿಸಿದ್ದಾರೆ. ಹೈಕಮಾಂಡ್ ಯಾವ ನಿರ್ಧಾರ ಮಾಡಲಿದೆ ಎಂದು ಕಾದು ನೋಡೋಣ ಎಂದಿದ್ದಾರೆ.
ಡಿಕೆ ಶಿವಕುಮಾರ್ ಖಂಡಿತ ಸಿಎಂ ಆಗಿಯೇ ಆಗುತ್ತಾರೆ. ಚುಂಚಶ್ರೀ ಬಳಗದವರು ಇಂದು ವಿಶೇಷವಾಗಿ ಪೂಜೆ ಮಾಡ್ತಿದ್ದಾರೆ. ಈ ಪೂಜಾ ಫಲ ಡಿಕೆ ಶಿವಕುಮಾರ್ ಗೆ ಸಿಗುವುದರಲ್ಲಿ ಸಂಶಯವಿಲ್ಲ. ದೇವರ ಅನುಗ್ರಹ ಅವರ ಮೇಲೆ ಇರಲಿ ಎಂದು ಅವರು ಹರಸಿದ್ದಾರೆ.