ನಿಖಿಲ್ ಕುಟುಂಬದಲ್ಲಿ ನಡೆದ ಘಟನೆ, ರಾಜ್ಯವೇ ತಲೆ ತಗ್ಗಿಸುವಂತದ್ದು. ನಿಖಿಲ್ ಇನ್ನೂ ರಾಜಕೀಯ ಪ್ರವೇಶ ಮಾಡಿಲ್ಲ, ತಾತ, ಅಪ್ಪ ಹೆಸರೇಳಿಕೊಂಡು ರಾಜಕೀಯಕ್ಕೆ ಬಂದಿದ್ದಾನೆ. ನಾನು ಮೂರು ಭಾರಿ ಮಿಲ್ಕ್ ಯೂನಿಯನ್ ಸದಸ್ಯ ಮತ್ತು ಅದ್ಯಕ್ಷ ಆಗಿದ್ದೇನೆ. 2028 ಕ್ಕೆ ನನ್ನ ಸೋಲಿಸೊದಾಗಿ ನಿಖಿಲ್ ಕುಮಾರಸ್ವಾಮಿ ಶಪಥ ಮಾಡಿದ್ದಾನೆ. ಅವರ ಅಪ್ಪನವರಿಗೆ ಕೇಳಲಿ. ನಮ್ಮ ಹಿಸ್ಟರಿ ಅವರಿಗೆ ಗೊತ್ತಿದೆ. ಮಾಲೂರಿನಲ್ಲಿ ಜೆಡಿಎಸ್ ಪಕ್ಷ ಕಟ್ಟಿ ಬೆಳೆಸಿದ್ದು ನಾನು ಎಂದು ನಂಜೇಗೌಡ ನೀಡಿರುವ ಹೇಳಿಕೆಗೆ ಮಾಲೂರು ಕಾಂಗ್ರೆಸ್ ಶಾಸಕ ನಂಜೇಗೌಡ ಸೋಲುತ್ತಾರೆ ಎಂದು ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿರುಗೇಟು ನೀಡಿದ್ಧಾರೆ.
ನಿಖಿಲ್ ಕುಮಾರ್ ಸ್ವಾಮಿ ವಿರುದ್ದ ಶಾಸಕ ಕೆವೈ ನಂಜೇಗೌಡ ವಾಗ್ದಾಳಿ ನಡೆಸಿದ್ದು, ಮಾಲೂರಿನಲ್ಲಿ ಜೆಡಿಎಸ್ ಅಭ್ಯರ್ಥಿ ರಾಮೇಗೌಡ ಬದಲಿಗೆ, ಹೂಡಿ ವಿಜಯ್ ಕುಮಾರ್ ಗೆಲ್ಲಿಸುವುದಾಗಿ ನಿಖಿಲ್ ಬೇರೆಡೆ ಹೇಳಿಕೆ ನೀಡಿದ್ದಾರೆ. ಮಾಲೂರಿನ ರಾಮೇಗೌಡರೇ ಜೆಡಿಎಸ್ ಅಭ್ಯರ್ಥಿ ಎಂದು ನಿಖಿಲ್ ಹೇಳಲಿ. 2028ಕ್ಕೆ ನಾನು ಕಾಂಗ್ರೆಸ್ ಅಭ್ಯರ್ಥಿ ಆಗುತ್ತೇನೆ, ಶಾಸಕನಾಗಿ ಆಯ್ಕೆ ಆಗುತ್ತೇನೆ ಎಂದು ನಂಜೇಗೌಡ ಹೇಳಿದ್ದರು.