ಬೆಂಗಳೂರು : ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಲ್ಲಿ (NHAI Recruitment 2025) 6 ಹುದ್ದೆಗಳು ಖಾಲಿ ಇದ್ದು, ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಲಾಗಿದೆ. ಚೀಫ್ ಜನರಲ್ ಮ್ಯಾನೇಜರ್ ಹುದ್ದೆಗಳ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಹ ಹಾಗೂ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಆನ್ ಲೈನ್ ಹಾಗೂ ಆಫ್ ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ನೇಮಕಾತಿಗೆ ಸಂಬಂಧಿಸಿದ ಹೆಚ್ಚಿನ ವಿವರ ಇಲ್ಲಿದೆ.
ಹುದ್ದೆಗಳ ವಿವರ
ನೇಮಕಾತಿ ಸಂಸ್ಥೆ: ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ
ಒಟ್ಟು ಹುದ್ದೆಗಳು: 6
ಹುದ್ದೆಗಳ ಹೆಸರು: ಚೀಫ್ ಜನರಲ್ ಮ್ಯಾನೇಜರ್
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಮಾರ್ಚ್ 6
ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನೇಮಕಾತಿ ಅಧಿಕೃತ ಅಧಿಸೂಚನೆ ಪ್ರಕಾರ, ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಯು ದೇಶದ ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ಸಿವಿಲ್ ಎಂಜಿನಿಯರಿಂಗ್ ನಲ್ಲಿ ಬಿಇ ಅಥವಾ ಬಿ.ಟೆಕ್ ಮುಗಿಸಿರಬೇಕು ಎಂದು ತಿಳಿಸಲಾಗಿದೆ.
ಗರಿಷ್ಠ 56 ವರ್ಷದ ವಯೋಮಿತಿಯನ್ನು ಪ್ರಾಧಿಕಾರ ನಿಗದಿಪಡಿಸಿದೆ. ಜನರಲ್ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷಗಳ ವಯೋಮಿತಿ ಸಡಿಲಿಕೆ ಇದೆ. ಇನ್ನು, ಎಸ್ಸಿ, ಎಸ್ಟಿಯವರಿಗೆ 5 ವರ್ಷಗಳ ಸಡಿಲಿಕೆ ಇದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ. ನೇಮಕಾತಿ ಹೊಂದಿದವರಿಗೆ ಮಾಸಿಕ 2.18 ಲಕ್ಷ ರೂಪಾಯಿವರೆಗೆ ಸಂಬಳ ನೀಡಲಾಗುತ್ತದೆ.
ಅರ್ಜಿ ಸಲ್ಲಿಸೋದು ಹೇಗೆ?
ಮೊದಲಿಗೆ ಅಧಿಕೃತ ವೆಬ್ಸೈಟ್ nhai.gov.in ಗೆ ಭೇಟಿ ನೀಡಿ
ಚೀಫ್ ಜನರಲ್ ಮ್ಯಾನೇಜರ್ ಉದ್ಯೋಗಗಳ ಅಧಿಸೂಚನೆಯನ್ನು ತೆರೆಯಿರಿ
ಯಾವುದೇ ತಪ್ಪುಗಳಿಲ್ಲದೆ ಅರ್ಜಿ ನಮೂನೆಯನ್ನು ಭರ್ತಿ ಮಾಡಿ.
ಕೊನೆಯ ದಿನಾಂಕಕ್ಕೂ ಮೊದಲು ಅರ್ಜಿ ನಮೂನೆಯನ್ನು ಸಲ್ಲಿಸಿ
ಫ್ಯೂಚರ್ ರೆಫರೆನ್ಸಿಗಾಗಿ ಅರ್ಜಿ ನಮೂನೆಯ ಸಂಖ್ಯೆ/ಸ್ವೀಕಾರ ಸಂಖ್ಯೆಯನ್ನು ಸುರಕ್ಷಿತವಾಗಿಡಿ
ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾದ ವಿಳಾಸ
DGM (HR/ ADMN)-III B, NHAI, Plot No-G5-&6, Sector-10, Dwarka, New Delhi-110075.
ಇದನ್ನೂ ಓದಿ : ವೀಲ್ಹ್ ಕಟ್ ಆಗಿ ತೋಟಕ್ಕೆ ನುಗ್ಗಿದ ಬಸ್ | ಕೂದಲೆಳೆ ಅಂತರದಲ್ಲಿ ಪ್ರಯಾಣಿಕರು ಪಾರು!



















