ಬೆಂಗಳೂರು : ಹೊಸ ವರ್ಷ 2026ರ ಆಚರಣೆಯ ಸಂಭ್ರಮದಲ್ಲಿ ಕರ್ನಾಟಕದಲ್ಲಿ ಮದ್ಯ ಮಾರಾಟ ದಾಖಲೆ ಮಟ್ಟದಲ್ಲಿ ಸೇಲ್ ಆಗಿದೆ. ಕಳೆದ ಮೂರು ವರ್ಷಗಳಲ್ಲಿ ಈ ಬಾರಿ ಅತಿ ಹೆಚ್ಚು ಮದ್ಯ ಮಾರಾಟವಾಗಿದ್ದು, ಅಬಕಾರಿ ಇಲಾಖೆಗೆ ರೂ. 745.84 ಕೋಟಿ ಆದಾಯ ಬಂದಿದೆ. ಇಂಡಿಯನ್ ಮೇಡ್ ಲಿಕ್ಕರ್ (IML) ಮತ್ತು ಬಿಯರ್ ಮಾರಾಟದಲ್ಲಿ ದಾಖಲೆ ಸೃಷ್ಟಿಯಾಗಿದೆ. ನಿರೀಕ್ಷೆಗೂ ಮೀರಿ ಮಾರಾಟವಾಗಿದ್ದು, ಇಲಾಖೆಯ ಖಜಾನೆ ತುಂಬಿದೆ.
ಡಿಸೆಂಬರ್ 29ರಿಂದ 31ರವರೆಗೆ ಮೂರು ದಿನಗಳಲ್ಲಿ ಭರ್ಜರಿ ಮಾರಾಟವಾಗಿದೆ. ಈ ಅವಧಿಯಲ್ಲಿ 9.84 ಲಕ್ಷ ಬಾಕ್ಸ್ IML ಮತ್ತು 6.64 ಲಕ್ಷ ಬಾಕ್ಸ್ ಬಿಯರ್ ಮಾರಾಟವಾಗಿದೆ. ಕಳೆದ ಮೂರು ವರ್ಷಕ್ಕೆ ಹೋಲಿಸಿದರೆ ಈ ಬಾರಿ ಬಿಯರ್ ಮಾರಾಟದಲ್ಲಿ ಭಾರೀ ಏರಿಕೆ ಕಂಡುಬಂದಿದೆ.
ಕಳೆದ ಮೂರು ವರ್ಷಗಳ ಹೋಲಿಕೆ!
2023: IML – 9.44 ಲಕ್ಷ ಬಾಕ್ಸ್, ಬಿಯರ್ – 6.16 ಲಕ್ಷ ಬಾಕ್ಸ್, ಆದಾಯ – ರೂ. 499.55 ಕೋಟಿ
2024: IML – 8.25 ಲಕ್ಷ ಬಾಕ್ಸ್, ಬಿಯರ್ – 5.03 ಲಕ್ಷ ಬಾಕ್ಸ್, ಆದಾಯ – ರೂ. 540.86 ಕೋಟಿ
2025: IML – 9.84 ಲಕ್ಷ ಬಾಕ್ಸ್, ಬಿಯರ್ – 6.64 ಲಕ್ಷ ಬಾಕ್ಸ್, ಆದಾಯ – ರೂ. 745.84 ಕೋಟಿ
ಈ ಬಾರಿ IML ಮಾರಾಟದಲ್ಲಿ 2024ಕ್ಕೆ ಹೋಲಿಸಿದರೆ 1.59 ಲಕ್ಷ ಬಾಕ್ಸ್ ಹೆಚ್ಚಳವಾಗಿದೆ. ಬಿಯರ್ ಮಾರಾಟದಲ್ಲಿ 1.61 ಲಕ್ಷ ಬಾಕ್ಸ್ ಏರಿಕೆಯಾಗಿದೆ. ಆದಾಯದಲ್ಲಿ ರೂ. 205 ಕೋಟಿ ಹೆಚ್ಚಳವಾಗಿದೆ.
ಡಿ.30ರಂದು ಹೆಚ್ಚಿನ ಸಂಖ್ಯೆಯಲ್ಲಿ ಲಿಕ್ಕರ್ ಮಾರಾಟ!
ಕಳೆದ ಮೂರು ದಿನಗಳ ಮಾರಾಟದಲ್ಲಿ ಡಿ. 30ರಂದು ಹೆಚ್ಚಿನ ಸಂಖ್ಯೆಯಲ್ಲಿ ಲಿಕ್ಕರ್ ಮಾರಾಟವಾಗಿದೆ.
ಡಿ. 29ರಂದು – 122.32 ಕೋಟಿ
ಡಿ. 30ರಂದು – 261.09 ಕೋಟಿ
ಡಿ. 31ರಂದು – 204.10 ಕೋಟಿ
ಹೊಸ ವರ್ಷಾಚರಣೆಯ ಹಿನ್ನೆಲೆಯಲ್ಲಿ ಮದ್ಯ ಮಾರಾಟದಲ್ಲಿ ಭಾರೀ ಏರಿಕೆ ಕಂಡುಬಂದಿದೆ. ಡಿಸೆಂಬರ್ 29ರಿಂದ 31ರವರೆಗೆ ಮೂರು ದಿನಗಳಲ್ಲಿ ರೂ. 587.51 ಕೋಟಿ ಮೌಲ್ಯದ ಮದ್ಯ ಮಾರಾಟವಾಗಿದೆ. ಇದರಲ್ಲಿ ಡಿಸೆಂಬರ್ 30ರಂದು ಅತಿ ಹೆಚ್ಚು ಮಾರಾಟವಾಗಿದ್ದು, ರೂ. 261.09 ಕೋಟಿ ಗಳಿಕೆಯಾಗಿದೆ. ಡಿಸೆಂಬರ್ 29ರಂದು ರೂ. 122.32 ಕೋಟಿ ಮತ್ತು 31ರಂದು ರೂ. 204.10 ಕೋಟಿ ಮಾರಾಟವಾಗಿದೆ.
ಇದನ್ನೂ ಓದಿ : ಹೊಸ ವರ್ಷಕ್ಕೆ BMTCಗೆ ಭರ್ಜರಿ ಆದಾಯ | ನಿನ್ನೆ ಒಂದೇ ದಿನ ಕಲೆಕ್ಷನ್ ಆಗಿದ್ದೆಷ್ಟು ಗೊತ್ತಾ?


















