
ನೂತನವಾಗಿ ಕೇಂದ್ರ ಸಚಿವರಾಗಿ ಆಯ್ಕೆಯಾಗಿರುವ ಮಾಜಿ ಮುಖ್ಯ ಮಂತ್ರಿ ಎಚ್.ಡಿ. ಕುಮಾರಸ್ವಾಮಿಯ ಮಾಧ್ಯಮದ ಜೊತೆ ಸಂಂಸ ಹಂಚಿ ಮಾತನಾಡಿದರು. ಇದೇ ಸಮಯದಲ್ಲಿ ತಮ್ಮನ್ನು ಸತ್ತಂತೆ ಕಂಡವರನ್ನು ಕೆಣಕಿ ಕುಟುಕಿದರು.
“ಪ್ರಧಾನಿ ನರೇಂದ್ರ ಮೋದಿ ಅವರ ಮಾರ್ಗದರ್ಶನ ಹಾಗೂ ಅವರ ಕನಸು ನನಸು ಮಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ. ಉತ್ಪಾದನಾ ಕ್ಷೇತ್ರದಲ್ಲಿ ಬಹಳ ನಿರೀಕ್ಷೆಗಳು ಇವೆ.ಇಲಾಖೆಯಲ್ಲಿ ಹೊಸ ಬದಲಾವಣೆ ತರಲು ಪ್ರಯತ್ನ ಮಾಡ್ತಿನಿ. ಉದ್ಯಮಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತೇನೆ. ಕರ್ನಾಟಕಕ್ಕೆ ಒಳ್ಳೆಯ ದಿನಗಳು ಪ್ರಾರಂಭವಾಗಿವೆ. ಹಾಗಾಗಿ ಪ್ರಧಾನಿಯವರು ನಮಗೆ ಉತ್ತಮ ಖಾತೆ ನೀಡಿದ್ದಾರೆ. ಮುಂದಿನ 15 ದಿನದಲ್ಲಿ ಈ ಇಲಾಖೆ ಕುರಿತು ವಿಷನ್ ಡಾಕ್ಯುಮೆಂಟ್ ಸಿದ್ಧ ಮಾಡಲಿದ್ದೇನೆ” ಎಂದರು.

‘ದೇವೇಗೌಡರ ರಾಜಕೀಯ ಮುಗಿದೆ ಹೋಯ್ತು’ ಎಂದವರಿಗೆ ಈಗ ಉತ್ತರ ಸಿಕ್ಕಿದೆ. ನಮ್ಮ ಪಕ್ಷ ಪುಟಿದೆದ್ದು ಬಂದಿದೆ ಈಗ ಕುಮಾರಸ್ವಾಮಿ ರಾಜಕೀಯ ಮುಗಿತು ಎಂದಾಗ ಯಾವುದೋ ಒಂದು ಶಕ್ತಿ ನಮ್ಮ ಪಕ್ಷಕ್ಕೆ ಬಂದಿದೆ” ಎಂದು ಕುಮಾರಸ್ವಾಮಿ ನೂತನ ಸಚಿವರಾದ ಹುಮ್ಮಸ್ಸಲ್ಲಿ ಎದುರಾಳಿಗಳಿಗೆ ಮಾತಲ್ಲೇ ಗುಮ್ಮಿದರು