2025 ಏಥರ್ 450ಯಲ್ಲಿ ಮಲ್ಟಿ ಮೋಡ್ ಟ್ರಾಕ್ಷನ್ ಕಂಟ್ರೋಲ್, ಮ್ಯಾಜಿಕ್ ಟ್ವಿಸ್ಟ್ ಮತ್ತುಅಧಿಕ ರೇಂಜ್‌ಹೊಂದಿದೆ. .
ಬೆಂಗಳೂರು, 09 ಜನವರಿ 2025: ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾದ ಏಥರ್ ಎನರ್ಜಿ ಲಿಮಿಟೆಡ್ (Ather Energy Limited) ಇಂದು ಹೊಸ ಅಪ್ ಡೇಟ್‌ಗಳನ್ನು ಹೊಂದಿರುವ 2025 ಏಥರ್ 450 ಸ್ಕೂಟರ್ ಬಿಡುಗಡೆ ಮಾಡಿದೆ. . 450ಎಕ್ಸ್ ಮತ್ತು 450 ಅಪೆಕ್ಸ್ ಸ್ಕೂಟರ್‌ಗಳಲ್ಲಿ ಹೆಚ್ಚಿನ ಸುರಕ್ಷತೆ ಒದಗಿಸುವ ಉದ್ದೇಶದಿಂದ ಮಲ್ಟಿ-ಮೋಡ್ ಟ್ರಾಕ್ಷನ್ ಕಂಟ್ರೋಲ್ ಅನ್ನು ಒದಗಿಸಲಾಗುತ್ತಿದೆ. ವಿಶೇಷವಾಗಿ ನಗರದ ದಟ್ಟ ಟ್ರಾಫಿಕ್‌ನಲ್ಲಿ ಅನುಕೂಲಕರವಾಗಿ, ಸುಲಭವಾಗಿ ರೈಡ್ ಮಾಡುವ ಅನುಭವ ಒದಗಿಸಲು ಮ್ಯಾಜಿಕ್ ಟ್ವಿಸ್ಟ್ ಫೀಚರ್ ಅನ್ನು ಪರಿಚಯಿಸಲಾಗಿದೆ.
ಏಥರ್ ಎನರ್ಜಿಯ ಮುಖ್ಯ ಬಿಸಿನೆಸ್ ಅಧಿಕಾರಿ ರವನೀತ್ ಎಸ್ ಫೋಕೆಲಾ(Ravneet S Phokela) ಬಿಡುಗಡೆ ಕುರಿತು ಮಾತನಾಡಿ , “ಹೊಸ ಏಥರ್ 450 ಅತಿ ಹೆಚ್ಚು ಕಾರ್ಯಕ್ಷಮತೆ ಒದಗಿಸಲಿದೆ. ಹಲವಾರು ವರ್ಷಗಳಿಂದ ನಾವು 450 ವೇರಿಯೆಂಟ್‌ನ ಕಾರ್ಯಕ್ಷಮತೆ ಹೆಚ್ಚಿಸುವ ಕಡೆಗೆ ನಿರಂತರವಾಗಿ ಗಮನ ಹರಿಸಿದ್ದೇವೆ. ಅದರಲ್ಲೂ ಸಾಫ್ಟ್ ವೇರ್ ಮತ್ತು ಹಾರ್ಡ್‌ವೇರ್ ಎರಡರಲ್ಲೂ ಸುಧಾರಣೆಗಳನ್ನು ಮಾಡಿದ್ದೇವೆ. ಅದರ ಫಲವಾಗಿ ಈಗ 2025 ಏಥರ್ 450 ಅನಾವರಣ ಮಾಡಿದ್ದು, ಇದರಲ್ಲಿ ನಾವು ಸುರಕ್ಷತೆ ಹೆಚ್ಚಿಸಿದ್ದೇವೆ,ʼʼ ಎಂದು ಹೇಳಿದ್ದಾರೆ.
ಮಲ್ಟಿ -ಮೋಡ್ ಟ್ರಾಕ್ಷನ್ ಕಂಟ್ರೋಲ್‌ನಂಥ ಫೀಚರ್‌ಗಳನ್ನು ನೀಡುತ್ತಿದ್ದೇವೆ. ಸಾಮಾನ್ಯವಾಗಿ ಹೈ ಎಂಡ್ ಮೋಟಾರ್ ಸೈಕಲ್ ಗಳಲ್ಲಿ ಕಂಡುಬರುವ ಈ ಫೀಚರ್ ಅನ್ನು ಒದಗಿಸುವ ಮೂಲಕ ಗ್ರಾಹಕರಿಗೆ ಮತ್ತು ಸ್ಕೂಟರ್‌ಗಳಿಗೆ ಹೆಚ್ಚಿನ ಸುರಕ್ಷತೆ ಒದಗಿಸುತ್ತಿದ್ದೇವೆ. ಈ ಫೀಚರ್ ಸವಾರನಿಗೆ ಸುಲಭವಾಗಿ ಪ್ರಯಾಣಿಸಲು ನೆರವಾಗುತ್ತದೆ. ವಾಹನದ ಮೇಲೆ ನಿಯಂತ್ರಣ ಹಾಗೂ ಸ್ಥಿರತೆ ಕಾಯ್ದುಕೊಳ್ಳಲು ನೆರವಾಗುತ್ತದೆ ಎಂದು ನುಡಿದರು.
450 ಅಪೆಕ್ಸ್ ಮತ್ತು ರಿಝ್ತಾ ಸ್ಕೂಟರ್‌ಗಳಲ್ಲಿ ನಾವು ಈ ಹಿಂದೆಯೇ ಮ್ಯಾಜಿಕ್ ಟ್ವಿಸ್ಟ್ ಅನ್ನು ಪರಿಚಯಿಸಿದ್ದೆವು. ಇದೀಗ 450ಎಕ್ಸ್ ಸ್ಕೂಟರ್ ನಲ್ಲಿಯೂ ಮ್ಯಾಜಿಕ್ ಟ್ವಿಸ್ಟ್ ಫೀಚರ್ ಪರಿಚಯಿಸುತ್ತಿದ್ದೇವೆ. ಈ ಹೊಸ ಅಪ್ ಡೇಟ್ ಗಳು, ಫೀಚರ್ ಗಳು ದೇಶಾದ್ಯಂತ ಇರುವ ಸ್ಕೂಟರ್ ಉತ್ಸಾಹಿಗಳಿಗೆ, ರೈಡರ್ ಗಳಿಗೆ ಅತ್ಯುತ್ತಮ ಹಾಗೂ ಹೆಚ್ಚು ಸುಧಾರಿತ ರೈಡಿಂಗ್ ಅನುಭವ ಒದಗಿಸುತ್ತದೆ ಎಂಬ ನಂಬಿಕೆ ನಮಗಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಏನಿದು ಫೀಚರ್?
2025 ಏಥರ್ 450ಎಕ್ಸ್ ಮತ್ತು ಏಥರ್ 450 ಅಪೆಕ್ಸ್ ಮಾಡೆಲ್‌ಗಳು ಮಲ್ಟಿ- ಮೋಡ್ ಟ್ರಾಕ್ಷನ್ ಕಂಟ್ರೋಲ್ ಫೀಚರ್ ಹೊಂದಿವೆ. ಸ್ಕೂಟರ್ ಸ್ಕಿಡ್ ಆಗಿ ಬೀಳುವುದನ್ನು ಈ ಫೀಚರ್ ತಡೆಯಲಿದೆ. ಇದನ್ನು ರೈಡರ್‌ಗಳಿಗೆ ಹೆಚ್ಚಿನ ಸುರಕ್ಷತೆ ಒದಗಿಸುವ ಸಲುವಾಗಿಯೇ ವಿನ್ಯಾಸಗೊಳಿಸಲಾಗಿದೆ. ಟ್ರಾಕ್ಷನ್ ಕಂಟ್ರೋಲ್ ವ್ಯವಸ್ಥೆ ಹಿಂದಿನ ಚಕ್ರದ ವೇಗವನ್ನು ಮುಂಭಾಗದ ಚಕ್ರದ ವೇಗದೊಂದಿಗೆ ಸರಿ ಹೊಂದಿಸುತ್ತದೆ ಮತ್ತು ರೈಡರ್‌ಗೆ ಉತ್ತಮ ಸ್ಥಿರತೆ ಒದಗಿಸುತ್ತದೆ.
ರೈನ್ ಮೋಡ್, ರೋಡ್ ಮೋಡ್ ಮತ್ತು ರಾಲಿ ಮೋಡ್ ಈ ಮೂರು ವಿಭಿನ್ನ ಮೋಡ್ ಗಳಲ್ಲಿ ಒಂದು ಮೋಡ್ ಆಯ್ಕೆ ಮಾಡಿಕೊಳ್ಳುವ ಅವಕಾಶವಿದೆ. ಈ ಪ್ರತಿಯೊಂದೂ ಮೋಡ್ ಅನ್ನು ಕೂಡ ನಿರ್ದಿಷ್ಟ ರೈಡಿಂಗ್ ಸನ್ನಿವೇಶಗಳಿಗಾಗಿ ರೂಪಿಸಲಾಗಿದೆ. ರೈನ್ ಮೋಡ್ ಹೆಚ್ಚಿನ ಸುರಕ್ಷತೆಗೆ ಆದ್ಯತೆ ನೀಡುತ್ತದೆ, ತೇವ ಹೊಂದಿರುವ ಮತ್ತು ಜಾರುವಂತಹ ಪ್ರದೇಶಗಳಲ್ಲಿ ಹೆಚ್ಚು ಗ್ರಿಪ್ ನೀಡಿ ಸ್ಲಿಪ್ ಆಗುವುದನ್ನು ಕಡಿಮೆ ಮಾಡುತ್ತದೆ. ರೋಡ್ ಮೋಡ್ ಸುರಕ್ಷತೆ ಮತ್ತು ಕಾರ್ಯಕ್ಷಮತೆ ಎರಡನ್ನೂ ಒದಗಿಸುತ್ತಿದ್ದು, ದೈನಂದಿನ ಬಳಕೆಗೆ ಸೂಕ್ತವಾಗಿದೆ. ರಾಲಿ ಮೋಡ್ ಅನ್ನು ಆಫ್-ರೋಡ್ ಉತ್ಸಾಹಿಗಳಿಗಾಗಿ ವಿನ್ಯಾಸಗೊಳಿಸಲಾಗಿದ್ದು, ಸ್ಲಿಪ್ ಆಗದಂತೆ ಹೆಚ್ಚು ನಿಯಂತ್ರಣ ಒದಗಿಸುತ್ತದೆ.
ರೇಂಜ್ ಹೆಚ್ಚಳ
ರೈಡಿಂಗ್ ಅನುಭವ ಇನ್ನಷ್ಟು ಸುಧಾರಿಸಲು ಹೆಚ್ಚು ರೇಂಜ್ ಒದಗಿಸುವುದರ ಕಡೆಗೆ ಏಥರ್ ಗಮನ ಕೇಂದ್ರೀಕರಿಸಿದೆ. 2025 ಏಥರ್ 450 ನಲ್ಲಿ ಎಂಆರ್‌ಎಫ್ ಕಂಪನಿ ಜೊತೆಗೆ ಅಭಿವೃದ್ಧಿಪಡಿಸಿದ ಮಲ್ಟಿ ಕಾಂಪೌಂಡ್ ಟೈರ್‌ಗಳನ್ನು ಪರಿಚಯಿಸಿದೆ. ಇದು ಬ್ರೇಕಿಂಗ್ ಸಂದರ್ಭದಲ್ಲಿ ವಿದ್ಯುತ್ ನಷ್ಟ ಆಗುವುದನ್ನು ತಡೆಯುತ್ತದೆ ಮತ್ತು ಹೆಚ್ಚು ರೇಂಜ್ ಒದಗಿಸಲು ನೆರವಾಗುತ್ತದೆ.
ಏಥರ್ 450ಎಕ್ಸ್ 3.7kWh (ಐಡಿಸಿ ರೇಂಜ್ 161 ಕಿಮೀಗಳು) ಮತ್ತು 450 ಅಪೆಕ್ಸ್ (ಐಡಿಸಿ ರೇಂಜ್ 157 ಕಿಮೀಗಳು) ಸ್ಕೂಟರ್ ಗಳು 130 ಕಿಮೀವರೆಗಿನ ಟ್ರೂ ರೇಂಜ್ ಅನ್ನು ಒದಗಿಸುತ್ತವೆ. 450ಎಕ್ಸ್ 2.9 kWh (ಐಡಿಸಿ ರೇಂಜ್ 126 ಕಿಮೀ ಗಳು) ಮತ್ತು ಏಥರ್ 450ಎಸ್ (ಐಡಿಸಿ ರೇಂಜ್ 122 ಕಿಮೀ ಗಳು) ಸಹ ಈಗ 105 ಕಿಮೀಗಳವರೆಗಿನ ಟ್ರೂ ರೇಂಜ್ ಒದಗಿಸುತ್ತವೆ.
ಬೆಲೆ ಎಷ್ಟು?
2025 ಏಥರ್ 450ಎಸ್ ಬೆಲೆ ₹1,29,999 (ಎಕ್ಸ್ ಶೋ ರೂಂ ಬೆಂಗಳೂರು). 2.9 kWh ಬ್ಯಾಟರಿಯ 2025 ಏಥರ್ 450ಎಕ್ಸ್ ಬೆಲೆ ₹1,46,999 (ಎಕ್ಸ್ ಶೋ ರೂಂ ಬೆಂಗಳೂರು) ಮತ್ತು 3.7 kWh ಬ್ಯಾಟರಿಯ 2025 ಏಥರ್ 450ಎಕ್ಸ್ ನ ಆರಂಭಿಕ ಬೆಲೆ ₹1,56,999 (ಎಕ್ಸ್ ಶೋ ರೂಂ ಬೆಂಗಳೂರು). 450 ಅಪೆಕ್ಸ್ ಈಗ ₹1,99,999 (ಎಕ್ಸ್ ಶೋ ರೂಂ ಬೆಂಗಳೂರು, ಪ್ರೊ ಪ್ಯಾಕ್ ಒಳಗೊಂಡು) ಬೆಲೆಯಲ್ಲಿ ದೊರೆಯುತ್ತದೆ