ಈ ಪ್ರಪಂಚದಲ್ಲಿ ಎಲ್ಲವೂ ಮನಸ್ಸಿದ್ದರೆ ಮಾತ್ರ ಸಾಧ್ಯ. ನನ್ನ ಕೈಯಲ್ಲಿ ಏನು ಆಗಲ್ಲ ಅಂದರೆ ಎಲ್ಲವೂ ಅಸಾಧ್ಯ ಅನಿಸುತ್ತೆ. ಕೆಲವೊಬ್ಬ ವ್ಯಕ್ತಿಗಳು ಬೇರೆಯವರ ಖುಷಿಯಲ್ಲಿ ತಮ್ಮ ಖುಷಿಯನ್ನು ಕಾಣುತ್ತಾರೆ. ಇನ್ನೂ ಕೆಲವರು ಯಾರ ಮೇಲೂ ಡಿಪೇಂಡ್ ಆಗದೇನೆ ಖುಷಿಯಾಗಿರುತ್ತಾರೆ. ಅದೇ ರೀತಿ ಇಲ್ಲೊಬ್ಬ ಅಂಧ ವ್ಯಕ್ತಿ ತನ್ನ ಪ್ರತಿಭೆಯ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಕಣ್ಣಿಲ್ಲದಿದ್ದರೂ ರೈಲ್ವೆ ಪ್ರಯಾಣವನ್ನು ಎಂಜಾಯ್ ಮಾಡುತ್ತಾ ಬಾಲಿವುಡ್ ಹಾಡನ್ನು ತುಂಬಾ ಸುಂದರವಾಗಿ ಹಾಡಿ. ಎಲ್ಲರನ್ನು ಖುಷಿ ಪಡಿಸಿದ್ದಾರೆ ಸದ್ಯ ಈ ವೀಡೀಯೋ ಎಲ್ಲೆಡೆ ವೈರಲ್ ಆಗುತ್ತಿದ್ದು, ನೆಟ್ಟಿಗರ ಮನ ಗೆದ್ದಿದ್ದಾರೆ.