ಬೆಂಗಳೂರು: ಒಳ ಮೀಸಲಾತಿ ಸಮೀಕ್ಷೆ ಸ್ಟಿಕ್ಕರ್ ಅಂಟಿಸುವ ವೇಳೆ ಕರ್ತವ್ಯ ಲೋಪ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ನೌಕರರನ್ನು ಅಮಾನತು ಮಾಡಲಾಗಿದೆ.
ಮತ್ತಿಕೆರೆ ಕಂದಾಯ ಇಲಾಖೆಯ ಮೌಲ್ಯಮಾಪಕ ರಾಮಾಂಜನೇಯಲು, ಅರ್ ಅರ್ ನಗರ ವಲಯದ ಕೆಂಗೇರಿ ಉಪ ವಿಭಾಗದ ಮೌಲ್ಯ ಮಾಪಕ ಪ್ರವೀಣ್ ಕುಮಾರ್ ಅಮಾನತುಗೊಂಡಿದ್ದಾರೆ. ಆಡಳಿತ ವಿಭಾಗದ ವಿಶೇಷ ಆಯುಕ್ತರು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ದಕ್ಷಿಣ ವಲಯದ ಹೊಂಬೇಗೌಡ ವಾರ್ಡ್ ಆರ್ ಐ ಆಗಿರುವ ಶುಭಾಶಿಣಿ ಕೂಡ ಅಮಾನತು ಆಗಿದ್ದಾರೆ. ಕಾರ್ಯಕ್ಷೇತ್ರಕ್ಕೆ ತೆರಳದೆ ಸಮೀಕ್ಷೆ ನಡೆಸಿರುವ ಆರೋಪ ಅವರ ಮೇಲಿದೆ. ಕಂದಾಯ ಮೌಲ್ಯಮಾಪಕಾಧಿಕಾರಿ ಹನುಮಂತರಾಜು ಕೂಡ ಅಮಾನತಾಗಿದ್ದಾರೆ. ಮನೆ ಬಾಗಿಲಿಗೆ ಸ್ಟಿಕ್ಕರ್ ಅಂಟಿಸುವ ವಿಚಾರವಾಗಿ ಅವರನ್ನೂ ಅಮಾನತು ಮಾಡಲಾಗಿದೆ. ವಿಡಿಯೋ ಮೂಲಕ ಸಾರ್ವಜನಿಕರು ದೂರು ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಚೀಫ್ ಕಮಿಷನರ್ ಮಹೇಶ್ವರ್ ರಾವ್ ಅಮಾನತು ಮಾಡಿದ್ದಾರೆ.