ನವದೆಹಲಿ: ಕೇಂದ್ರ ಲೋಕಸೇವಾ ಆಯೋಗವು (ಯುಪಿಎಸ್ ಸಿ) ರಾಷ್ಟ್ರೀಯ ರಕ್ಷಣಾ ಅಕಾಡೆಮಿ (ಎನ್ ಡಿಎ)-1 ಹಾಗೂ ನೌಕಾ ಅಕಾಡೆಮಿ (ಎನ್ಎ)-1 ಪರೀಕ್ಷೆಯ ಪ್ರವೇಶಪತ್ರವನ್ನು (NDA I Admit Card) ಬಿಡುಗಡೆ ಮಾಡಿದೆ. ಏಪ್ರಿಲ್ 13ರಂದು ದೇಶಾದ್ಯಂತ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, ಅಭ್ಯರ್ಥಿಗಳು ಹಾಲ್ ಟಿಕೆಟ್ ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ.
ಎನ್ ಡಿಎ ಹಾಗೂ ಎನ್ ಎ ಪರೀಕ್ಷೆ ನಡೆದ ಬಳಿಕ ಸಂದರ್ಶನ ನಡೆಸಲಾಗುತ್ತದೆ. ಲಿಖಿತ ಪರೀಕ್ಷೆ ಹಾಗೂ ಸಂದರ್ಶನದ ಫಲಿತಾಂಶದ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಪರೀಕ್ಷಾ ಕೇಂದ್ರಗಳ ವಿವರಗಳು ಅಭ್ಯರ್ಥಿಗಳ ಅಡ್ಮಿಟ್ ಕಾರ್ಡ್ ನಲ್ಲಿ ಇರುತ್ತದೆ. ಒಟ್ಟು 406 ಹುದ್ದೆಗಳ ನೇಮಕಾತಿಗಾಗಿ ಯುಪಿಎಸ್ ಸಿಯು ಅಧಿಸೂಚನೆ ಹೊರಡಿಸಿದೆ.
ಪ್ರವೇಶ ಪತ್ರ ಡೌನ್ ಲೋಡ್ ಮಾಡಿಕೊಳ್ಳುವುದು ಹೇಗೆ?
- ಯುಪಿಎಸ್ಸಿ ಅಧಿಕೃತ ವೆಬ್ಸೈಟ್ upsc.gov.in ಗೆ ಭೇಟಿ ನೀಡಿ
- ಓಪನ್ ಆದ ಹೋಮ್ಪೇಜ್ನಲ್ಲಿ ‘What’s News’ ಎಂಬ ಮೆನು ಗಮನಿಸಿ
- e -Admit Card : National Defence Academy and Naval Academy Examination (i) ಎಂಬ ಲಿಂಕ್ ಕ್ಲಿಕ್ ಮಾಡಿ
- ಪ್ರವೇಶ ಪತ್ರಕ್ಕೆ ಸಂಬಂಧಿಸಿದಂತೆ ಮತ್ತೊಂದು ವೆಬ್ ಪೇಜ್ ಓಪನ್ ಆಗುತ್ತದೆ.
- ಈ ಪೇಜ್ ನಲ್ಲಿ Click Here ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ. ಓಪನ್ ಆಗುವ ಮುಂದಿನ ವೆಬ್ ಪೇಜ್ನಲ್ಲಿಯೂ ಇದೇ ಪ್ರಕ್ರಿಯೆ ಮುಂದುವರಿಸಿ
- ರಿಜಿಸ್ಟರ್ ಐಡಿ ಅಥವಾ ರೋಲ್ ನಂಬರ್, ಎರಡರಲ್ಲಿ ಯಾವುದಾದರೂ ಒಂದು ಮಾಹಿತಿ ಮತ್ತು ಜನ್ಮ ದಿನಾಂಕ ಮಾಹಿತಿ ಎಂಟರ್ ಮಾಡಿ.
- ‘Submit’ ಎಂಬಲ್ಲಿ ಕ್ಲಿಕ್ ಮಾಡುವ ಮೂಲಕ ಪ್ರವೇಶ ಪತ್ರ ಡೌನ್ ಲೋಡ್ ಮಾಡಿಕೊಳ್ಳಿ