ಚಿಕ್ಕಮಗಳೂರು: ಶೃಂಗೇರಿ ನ್ಯಾಯಾಲಯಕ್ಕೆ ನಕ್ಸಲ್ ನಾಯಕ ಬಿ.ಜಿ. ಕೃಷ್ಣಮೂರ್ತಿಯನ್ನು ಬಿಗಿ ಪೊಲೀಸ್ ಭದ್ರತೆಯಲ್ಲಿ ಹಾಜರು ಪಡಿಸಲಾಗಿದೆ.
ನಕ್ಸಲ್ ನಾಯಕ ಬಿ.ಜಿ. ಕೃಷ್ಣಮೂರ್ತಿ ತಾಯಿಯ ಭೇಟಿಗೆ ಅವಕಾಶ ನೀಡುವಂತೆ ಮನವಿ ಮಾಡಿದ್ದ. ತಾಯಿ ಭೇಟಿಗೆ ನ್ಯಾಯಾಲಯ ಅವಕಾಶ ನೀಡಿದೆ. ಎರಡು ವರ್ಷಗಳ ಬಳಿಕ ತಾಯಿಯನ್ನು ಕೃಷ್ಣಮೂರ್ತಿ ಭೇಟಿ ಮಾಡಿದ್ದಾನೆ.
ಶೃಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ ಚಂದ್ರಕಾಂತ್ ಮನೆ ಮೇಲೆ ದಾಳಿ ವಿಷಯವಾಗಿ ಕೇಸ್ ದಾಖಲಾಗಿತ್ತು. ಆ ಪ್ರಕರಣಕ್ಕೆ ಸಂಬಧಿಸಿದಂತೆ ಕೃಷ್ಣಮೂರ್ತಿ ನ್ಯಾಯಾಲಯಕ್ಕೆ ಹಾಜರಾಗಿದ್ದ. ಬಿ.ಜಿ. ಕೃಷ್ಣಮೂರ್ತಿ ಮೇಲೆ ಕರ್ನಾಟಕದಲ್ಲಿ 54 ಕೇಸ್ ಗಳು ದಾಖಲಾಗಿವೆ. 2021ರಲ್ಲಿ ಕೇರಳ ಪೊಲೀಸರು ಬಿ.ಜಿ. ಕೃಷ್ಣಮೂರ್ತಿಯನ್ನು ಅರೆಸ್ಟ್ ಮಾಡಿದ್ದರು. ಕೇರಳ ಪೊಲೀಸರ ವಶದಲ್ಲಿರುವ ಬಿ.ಜಿ ಕೃಷ್ಣಮೂರ್ತಿಯನ್ನು ಕೇರಳದಿಂದ ಶೃಂಗೇರಿ JMFC ನ್ಯಾಯಾಲಯಕ್ಕೆ ಪೊಲೀಸರು ಕರೆ ತಂದಿದ್ದರು. ಬಿ.ಜಿ ಕೃಷ್ಣಮೂರ್ತಿ ಶೃಂಗೇರಿ ತಾಲೂಕಿನ ಬುಕ್ಕಡಿಬೈಲು ಗ್ರಾಮದವನು ಎನ್ನಲಾಗಿದೆ.