ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತೀಯ ಆಟಗಾರ ದಾಖಲೆಯ ಬರೆಯುವುದರ ಮೂಲಕ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ.
ಪ್ಯಾರಾಲಿಂಪಿಕ್ಸ್ ನ ಜಾವೆಲಿನ್ ಥ್ರೋ ಎಫ್ 41 ಸ್ಪರ್ಧೆಯಲ್ಲಿ ಭಾರತದ ಜಾವೆಲಿನ್ ಎಸೆತಗಾರ ನವದೀಪ್ ಸಿಂಗ್ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ. ನವದೀಪ್ ಸಿಂಗ್ 47.32 ಮೀಟರ್ ದೂರಕ್ಕೆ ಜಾವೆಲಿನ್ ಎಸೆಯುವ ಮೂಲಕ ಪ್ಯಾರಾಲಿಂಪಿಕ್ಸ್ ನಲ್ಲಿ ನೂತನ ದಾಖಲೆ ಬರೆದಿದ್ದಾರೆ. ಟೋಕಿಯೊ 2021 ಪ್ಯಾರಾಲಿಂಪಿಕ್ಸ್ ನಲ್ಲಿ ಚೀನಾದ ಪೆಂಗ್ ಕ್ಸಿಯಾಂಗ್ ಸನ್ 47.13m ದೂರಕ್ಕೆ ಜಾವೆಲಿನ್ ಎಸೆದಿದ್ದು, ದಾಖಲೆಯಾಗಿತ್ತು. ನವದೀಪ್ ಸಿಂಗ್ 47.32 ಮೀಟರ್ ದೂರ ಎಸೆಯುವ ಮೂಲಕ ದಾಖಲೆ ಬರೆದಿದ್ದಾರೆ.
ಈ ಸ್ಪರ್ಧೆಯಲ್ಲಿ ನವದೀಪ್ ಬೆಳ್ಳಿ ಪದಕ ಗೆದ್ದಿದ್ದರು. ಆದರೆ, ಇರಾನ್ ನ ಬೀಟ್ ಸಡೆಗ್ ಅವರು ಕ್ರೀಡಾಹೀನ ನಡವಳಿಕೆಗಾಗಿ ಅನರ್ಹಗೊಂಡ ನಂತರ ನವದೀಪ್ ಗೆ ಚಿನ್ನದ ಪದಕ ನೀಡಲಾಯಿತು. ಈ ಮೂಲಕ ನವದೀಪ್ ಚಿನ್ನಕ್ಕೆ ಕೊರಳೊಡ್ಡಿದರು. ಈ ಮೂಲಕ ನವದೀಪ್ ಸಿಂಗ್ ಭಾರತಕ್ಕೆ 7ನೇ ಚಿನ್ನದ ಪದಕ ಕೊಡುಗೆಯಾಗಿ ನೀಡಿದರು.
ಅಲ್ಲದೇ, ಮತ್ತೋರ್ವ ಭಾರತೀಯ ಆಟಗಾರ್ತಿ ಮಹಿಳೆಯರ 200 ಮೀ ಟಿ12 ಓಟದ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದರು. ಭಾರತದ ಸಿಮ್ರಾನ್ ಶರ್ಮಾ ಕಂಚಿನ ಪದಕ ಗೆದ್ದರು. ಈ ಮೂಲಕ ಭಾರತದ ಪದಕಗಳ ಸಂಖ್ಯೆ 29ಕ್ಕೆ ಏರಿಕೆಯಾಗಿದೆ. ಭಾನುವಾರ ಕೊನೆಯ ದಿನವಾಗಿದ್ದು, ಭಾರತ ತನ್ನ ಪದಕಗಳ ಸಂಖ್ಯೆಯನ್ನು 30ಕ್ಕೆ ಏರಿಕೆ ಮಾಡಲಿದೆಯೇ ಕಾಯ್ದು ನೋಡಬೇಕಿದೆ.