ಅಮರಾವತಿ: ನಂದಿನಿ ಹವಾ ರಾಜ್ಯವಷ್ಟೇ ಅಲ್ಲ, ದೇಶದ ಉದ್ದಗಲಕ್ಕೂ ಹಬ್ಬಿದೆ. ಈಗ ತಿರುಪತಿ ತಿಮ್ಮಪ್ಪನ ಸನ್ನಿಧಿಗೆ (Tirupati Timmappa Temple) ದಾಖಲೆ ಎಂಬಂತೆ ಕೆಎಂಎಫ್ (KMF) ನಂದಿನಿ ತುಪ್ಪ ಹರಿದು ಹೋಗುತ್ತಿದೆ.
ತಿರುಪತಿಯಲ್ಲಿ ಈ ಹಿಂದೆ ಬೇರೆ ಬ್ರ‍್ಯಾಂಡ್ ತುಪ್ಪ ಬಳಸಿ ಲಡ್ಡು ತಯಾರು ಮಾಡಲಾಗುತ್ತಿತ್ತು. ಇದು ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಸದ್ಯ ಲಡ್ಡು ತಯಾರಿಕೆಗಾಗಿ ಕೆಎಂಎಫ್ ನಂದಿನಿ ತುಪ್ಪವನ್ನು ಮಾತ್ರ ಬಳಸುತ್ತಿದ್ದು, ಇದರ ಹೊರತಾಗಿ ಬೇರೆ ಯಾವುದೇ ತುಪ್ಪವನ್ನು ಬಳಸುತ್ತಿಲ್ಲ. ಹೀಗಾಗಿ ಈಗ ನಂದಿನಿ ತುಪ್ಪ ಮಾತ್ರ ತಿರುಪತಿಗೆ ಹೋಗುತ್ತಿದೆ.
ಯುಗಾದಿ ಸಮೀಪಿಸುತ್ತಿದ್ದು, ಲಡ್ಡು ತಯಾರಿಕೆಗಾಗಿ ತುರ್ತು 2 ಸಾವಿರ ಟನ್ ತುಪ್ಪವನ್ನು ಕಳುಹಿಸಿಕೊಡುವಂತೆ ಟಿಟಿಡಿ (TTD) ಕೆಎಂಎಫ್ ಮನವಿ ಮಾಡಿದೆ. ಇದೇ ತಿಂಗಳು ಕಳುಹಿಸುವಂತೆ ಮನವಿ ಮಾಡಿದೆ. ತಿಮ್ಮಪ್ಪನ ಸನ್ನಿಧಾನಕ್ಕೆ ಎರಡು ದಿನಕ್ಕೆ ಒಮ್ಮೆ ತುಪ್ಪ ರವಾನೆಯಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಪ್ರತಿ ದಿನವೂ ತುಪ್ಪ ರವಾನೆಯಾಗುತ್ತಿದೆ. 5 ಸಾವಿರ ಟನ್ ತುಪ್ಪವನ್ನು ರವಾನಿಸುವಂತೆ ಟಿಟಿಡಿ ಕೆಎಂಎಫ್‌ಗೆ ಬೇಡಿಕೆ ಇಟ್ಟಿದ್ದು, ಈಗಾಗಲೇ 600 ಟನ್ ತುಪ್ಪ ಕಳುಹಿಸಿಕೊಡಲಾಗಿದೆ.