ಬೆಂಗಳೂರು : ನಾಳೆ ರಾಜಧಾನಿ ಬೆಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ ಹಳದಿ ಮಾರ್ಗದ ಮೆಟ್ರೋ ಸೇರಿ ಮೂರು ವಂದೇ ಭಾರತ್ ಟ್ರೈನ್ ಗೆ ಚಾಲನೆ ಹಾಗೂ ಮೆಟ್ರೋ ಮೂರನೇ ಹಂತದ ಕಾಮಗಾರಿಗೆ ಶಂಕು ಸ್ಥಾಪನೆ ಮಾಡುವುದಕ್ಕಾಗಿ ಆಗಮಿಸುತ್ತಿದ್ದಾರೆ.
ಬೆಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುವ ಹಿನ್ನೆಲೆಯಲ್ಲಿ ಹಲವೆಡೆ ಇಂದಿನಿಂದಲೇ ಭದ್ರತಾ ದೃಷ್ಟಿಯಿಂದ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ. ಬಹುತೇಕ ಕಡೆಗಳಲ್ಲಿ ರಸ್ತೆ ಬದಿ ಬ್ಯಾರಿಕೇಡ್ ಗಳನ್ನು ಅಳವಡಿಕೆ ಮಾಡಲಾಗಿದೆ. ಮಾತ್ರವಲ್ಲದೇ, ಮೋದಿ ಆಗಮಿಸುತ್ತಿರುವುದರಿಂದ ಗುಂಡಿ ಬಿದ್ದ ರಸ್ತೆಗಳಿಗೆ ಡಾಂಬರ್ ಹಾಕಲಾಗಿದೆ. ಮಾತ್ರವಲ್ಲದೇ ಪ್ರಮುಖ ಜಂಕ್ಷನ್ ಗಳಲ್ಲಿ ಮೋದಿಗೆ ಸ್ವಾಗತ ಕೋರುವ ಫ್ಲೆಕ್ಸ್ ಅಳವಡಿಕೆಯನ್ನೂ ಮಾಡಲಾಗಿದೆ.
“ನಾಳೆ ಮೋದಿ ಕಾರ್ಯಕ್ರಮಗಳು : ವೇಳಾಪಟ್ಟಿ ಇಂತಿವೆ”
- ನಾಳೆ ಬೆಳಗ್ಗೆ 7.50ಕ್ಕೆ ದಿಲ್ಲಿಯಿಂದ ವಿಮಾನ ಮೂಲಕ ನಮೋ ಬೆಂಗಳೂರಿನತ್ತ ಪಯಣ.
- ಬೆಳಗ್ಗೆ 10.30ಕ್ಕೆ ಬೆಂಗಳೂರಿನ HAL ಪ್ರಧಾನಿ ತಲುಪುತ್ತಾರೆ.
- 10.35 ಕ್ಕೆ HAL ಏರ್ ಪೋರ್ಟ್ ನಿಂದ ಹೆಲಿಕಾಪ್ಟರ್ ಮೂಲಕ ಮೇಖ್ರಿ ವೃತ್ತ ಬಳಿ ಇರುವ ಏರ್ ಫೋರ್ಸ್ ಕಮಾಂಡೊ ತರಬೇತಿ ಕೇಂದ್ರಕ್ಕೆ ಆಗಮನ.
- ಬೆಳಗ್ಗೆ 11 ಗಂಟೆಗೆ ರಸ್ತೆ ಮೂಲಕ ಹೊರಟು 11.10ಕ್ಕೆ KSR ಬೆಂಗಳೂರು ರೈಲ್ವೆ ನಿಲ್ದಾಣಕ್ಕೆ ಮೋದಿ ಆಗಮನ.
- ಬೆಳಗ್ಗೆ 11.15ರಿಂದ ಬೆಂಗಳೂರು-ಬೆಳಗಾವಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಮೋದಿ ಚಾಲನೆ.
- ಅಮೃತಸರ-ಶ್ರೀಮಾತಾ ವೈಷ್ಣೋದೇವಿ, ಕಟ್ರಾ ಮತ್ತು ನಾಗಪುರ-ಪುಣೆ (ವರ್ಚುವೆಲ್) ರೈಲು ಸಂಚಾರ ಸೇವೆಗೂ ಮೋದಿ ಹಸಿರು ನಿಶಾನೆ
- 11.30 ಕ್ಕೆ KSR ಬೆಂಗಳೂರು ರೈಲ್ವೆ ನಿಲ್ದಾಣದಿಂದ ರಸ್ತೆ ಮೂಲಕ ಪಯಣ.
- 11.40ಕ್ಕೆ ಆರ್ ವಿ ರಸ್ತೆ (ರಾಗಿಗುಡ್ಡ) ಮೆಟ್ರೋ ಸ್ಟೇಷನ್ ಗೆ ಆಗಮನ.
- 11.45ಕ್ಕೆ ಮೆಟ್ರೋದಲ್ಲಿ ಸಂಚಾರ ಮಾಡಲಿರುವ ನಮೋ
- 12.50 ಕ್ಕೆ ಎಲೆಕ್ಟ್ರಾನಿಕ್ ಸಿಟಿ ಮೆಟ್ರೋ ನಿಲ್ದಾಣಕ್ಕೆ ಮೋದಿ ಆಗಮಿಸುತ್ತಾರೆ.
- ಎಲೆಕ್ಟ್ರಾನಿಕ್ ಸಿಟಿಯಲ್ಲಿನ ಐಐಐಟಿ ಸಭಾಂಗಣದಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಭಾಗಿ.
- ಮೆಟ್ರೋ ಹಂತ-3ರ ಕಾಮಗಾರಿಗೆ ನರೇಂದ್ರ ಮೋದಿ ಶಂಕುಸ್ಥಾಪನೆ.
- ಮಧ್ಯಾಹ್ನ 2.40ಕ್ಕೆ ಎಚ್‌ಎಎಲ್ ವಿಮಾನ ನಿಲ್ದಾಣದಿಂದ ದಿಲ್ಲಿಗೆ ಮರಳಿ ಮೋದಿ ಪಯಣ.