ಟಾಲಿವುಡ್ ನ ಹಿರಿಯ ನಟ ನಾಗಾರ್ಜುನರ ಕಿರಿಯ ಪುತ್ರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ನಟ ಅಖಿಲ್ ಅಕ್ಕಿನೇನಿ ತಮ್ಮ ದೀರ್ಘ ಕಾಲದ ಗೆಳತಿ ಜೈನಾಬ್ ರಾವ್ಜಿ ಅವರೊಟ್ಟಿಗೆ ಸಪ್ತಪದಿ ತುಳಿದ್ದಾರೆ.
ಹೈದ್ರಾಬಾದ್ ನ ತನ್ನ ನಿವಾಸದಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮೂರು ವರ್ಷಗಳಿಂದ ರಿಲೇಷನ್ ಶಿಪ್ ನಲ್ಲಿದ್ದ ಅಖಿಲ್ ಮತ್ತು ಜೈನಾಬ್ ಕಳೆದ ವರ್ಷದ ನವೆಂಬರ್ 26ರಂದು ನಿಶ್ಚಿತಾರ್ಥ ಮಾಡಿಕೊಂಡಿದ್ದರು.

ಇನ್ನು ನಿನ್ನೆ ನಡೆದ ಬಾರಾತ್ ಸಂಭ್ರಮದಲ್ಲಿ ಟಾಲಿವುಡ್ ಸೂಪರ್ ಸ್ಟಾರ್ ಚಿರಂಜೀವಿ ಪತ್ನಿ ಸುರೇಖಾ ಜೊತೆ ಭಾಗಿಯಾಗಿದ್ದರು. ಇದೇ ವೇಳೆ ನಟ ರಾಮ್ ಚರಣ್ ಹಾಗೂ ಪತ್ನಿ ಉಪಾಸನಾ ಕೂಡಾ ಉಪಸ್ಥಿತರಿದ್ದರು.