ಮೈಸೂರಿ : ನಾಡಿನ ಹೆಸರಾಂತ ಕುಸ್ತಿಪಟು, ವಜ್ರಮುಷ್ಠಿ ಕಾಳಗದ ಪ್ರಮುಖ ತರಬೇತಿದಾರರಾದ ಟೈಗರ್ ಬಾಲಾಜಿ (67) ನಿಧನರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ಟೈಗರ್ ಬಾಲಾಜಿ ಅವರು ತಮ್ಮ ವೃತ್ತಿಜೀವನದಲ್ಲಿ 350ಕ್ಕೂ ಹೆಚ್ಚು ಕುಸ್ತಿ ಪಂದ್ಯಗಳಲ್ಲಿ ಭಾಗವಹಿಸಿ ಅಪಾರ ಖ್ಯಾತಿ ಗಳಿಸಿದ್ದರು. ವಿಶೇಷವಾಗಿ ನಾಡಹಬ್ಬ ಮೈಸೂರು ದಸರಾದಲ್ಲಿ ನಡೆಯುವ ವಜ್ರಮುಷ್ಠಿ ಕಾಳಗಕ್ಕೆ ಅನೇಕ ಪೈಲ್ವಾನರನ್ನು ತಯಾರು ಮಾಡಿ ಕುಸ್ತಿ ಪರಂಪರೆಯನ್ನು ಜೀವಂತವಾಗಿಟ್ಟಿದ್ದರು.
ಇವರ ನಿಧನಕ್ಕೆ ಕುಸ್ತಿ ವಲಯದಲ್ಲಿ ತೀವ್ರ ಶೋಕ ವ್ಯಕ್ತವಾಗಿದ್ದು, ಅಭಿಮಾನಿಗಳು, ಶಿಷ್ಯರು ಹಾಗೂ ಕ್ರೀಡಾಭಿಮಾನಿಗಳು ಸಂತಾಪ ಸೂಚಿಸಿದ್ದಾರೆ. ಟೈಗರ್ ಬಾಲಾಜಿ ಅವರ ಅಗಲಿಕೆಯಿಂದ ನಾಡು ಒಬ್ಬ ಶ್ರೇಷ್ಠ ಕುಸ್ತಿ ಪಟುವನ್ನೂ, ಗುರುವರ್ಯನನ್ನೂ ಕಳೆದುಕೊಂಡಂತಾಗಿದೆ.
ಇದನ್ನೂ ಓದಿ : ಹಾವೇರಿ | ಕರ್ಜಗಿ ಜಾತ್ರೆಯಲ್ಲಿ ತಲೆಎತ್ತಿದ ಅಕ್ರಮ ಜೂಜು ಅಡ್ಡೆಗಳು ; ಪೊಲೀಸರ ಗಮನಕ್ಕೆ ಬಂದರೂ ಡೋಂಟ್ ಕೇರ್!



















