ನೇಪಿಟಾವ್: ಮ್ಯಾನ್ಮಾರ್ ನಲ್ಲಿ (Myanmar Earthquake) ಎರಡು ಬಾರಿ ಪ್ರಭಲ ಭೂಕಂಪ ಸಂಭವಿಸಿದ್ದು, ಸಾವಿನ ಸಂಖ್ಯೆ 144ಕ್ಕೆ ಏರಿಕೆಯಾಗಿದೆ. ಅಲ್ಲದೇ, 732 ಜನರು ಗಾಯಗೊಂಡಿದ್ದಾರೆ. ಹೀಗಾಗಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ.
ಭೂಕಂಪನದ ತೀವ್ರತೆ ಥ್ಯಾಯ್ಲೆಂಡ್ ನ (Thailand) ಬ್ಯಾಂಕಾಕ್ ಮತ್ತು ಬಾಂಗ್ಲಾದೇಶದವರೆಗೂ ವ್ಯಾಪಿಸಿದೆ. ಮ್ಯಾನ್ಮಾರ್ ನಲ್ಲಿ ಭಾರಿ ಹಾನಿಯಾಗಿದ್ದು, 144 ಜನರು ಸಾವನ್ನಪ್ಪಿದ್ದಾರೆ. 732 ಜನರು ಗಾಯಗೊಂಡಿದ್ದಾರೆ. ಹಲವಾರು ಮನೆಗಳು ಹಾನಿಯಾಗಿವೆ. ನೂರಾರು ಕಟ್ಟಡಗಳು ಧರೆಗುರುಳಿದ್ದು, ಜನ – ಜೀವನ ಸಂಪೂರ್ಣ ಅಸ್ಯವ್ಯಸ್ಥಗೊಂಡಿದೆ.
7.7 ಮತ್ತು 7.4 ತೀವ್ರತೆಯಲ್ಲಿ ಭೂಕಂಪನ ಸಂಭವಿಸಿದ್ದು, ಭಾರಿ ಅನಾಹುತಗಳು ಸಂಭವಿಸಿವೆ. ಪಕ್ಕದ ರಾಷ್ಟ್ರಗಳಾದ ಭಾರತ, ಥೈಲ್ಯಾಂಡ್ ಮತ್ತು ಬಾಂಗ್ಲಾದೇಶದಲ್ಲೂ ತೀವ್ರ ಕಂಪನ ಅನುಭವವಾಗಿದೆ. ಮ್ಯಾನ್ಮಾರ್ ಸರ್ಕಾರವು ತುರ್ತು ಪರಿಸ್ಥಿತಿ ಘೋಷಿಸಿ, ಸೇನೆ ಮತ್ತು ಸ್ಥಳೀಯ ರಕ್ಷಣಾ ತಂಡಗಳನ್ನು ಕಾರ್ಯಾಚರಣೆಗೆ ಇಳಿಸಿದೆ. ತ್ವರಿತವಾಗಿ ಕಾರ್ಯಾಚರಣೆ ನಡೆಯುತ್ತಿದೆ.