ರಾಜ್ಯದಲ್ಲಿ ಐದು ವರ್ಷ ನಮ್ಮ ತಂದೆಯೇ ಸಿಎಂ ಅಂತಾ ಯತೀಂದ್ರ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಸಿಎಂ ಬದಲಾವಣೆ ಪ್ರಶ್ನೆಯೇ ಇಲ್ಲಾ ಅಂತಾ ಎಐಸಿಸಿ ಕಾರ್ಯದರ್ಶಿಯೇ ಹೇಳಿರುವಾಗ ಈ ಬಗ್ಗೆ ಚರ್ಚೆಯೇ ಅಪ್ರಸ್ತುತ ಎಂದಿರುವ ಯತೀಂದ್ರ, ಇಂಥದ್ದೊಂದು ಆಲೋಚನೆ ಕೂಡಾ ಹೈಕಮಾಂಡ್ ಮುಂದಿಲ್ಲ ಎಂದಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಯತೀಂದ್ರ, ನವೆಂಬರ್ ಗೆ ಸರ್ಕಾರ ಬಂದು ಎರಡೂವರೆ ವರ್ಷವಾಗುತ್ತೆ. ಹೀಗಾಗಿ ಬದಲಾವಣೆ ಅನ್ನೋದು ಮುನ್ನೆಲೆಗೆ ಬಂದಿರಬಹುದು. ಈ ಬಗ್ಗೆ ಶಾಸಕರು ತಮ್ಮ ಅಭಿಪ್ರಾಯ ಹೇಳೋದು ತಪ್ಪಲ್ಲ. ಹಾಗಂತಾ ಸಿಎಂ ಬದಲಾಯಿಸಬೇಕಿರೋದು ಶಾಸಕರು ಮತ್ತು ಹೈಕಮಾಂಡ್ ವರಿಷ್ಠರು.
ಹಾಗಂತಾ ಒಬಿಸಿ ಸಮಿತಿಯಲ್ಲಿ ಸಿದ್ದರಾಮಯ್ಯರನ್ನು ಸದಸ್ಯರಾಗಿಸಿರೋದಕ್ಕೂ ಸಿಎಂ ಕುರ್ಚಿಯಿಂದ ಕೆಳಗಿಳಿಯೋದಕ್ಕೂ ಸಂಬಂಧವಿಲ್ಲ, ಅಂತಲೂ ಯತೀಂದ್ರ ಪುನರುಚ್ಛರಿಸಿದ್ದಾರೆ. ಹಾಗಂತಾ ಒಬಿಸಿ ಸಮಿತಿ ನೇಮಕಕ್ಕೂ ಬದಲಾವಣೆಗೂ ಸಂಬಂಧ ಕಲ್ಪಿಸ್ತಿರೋ ಬಿಜೆಪಿ ನಾಯಕರಿಗೆ ಕಾಮನ್ ಸೆನ್ಸ್ ಇಲ್ಲ ಅಂತಾ ಯತೀಂದ್ರ ಕಿಡಿಕಾರಿದ್ದಾರೆ.