ಮಂಡ್ಯ : ವಕ್ಫ್ ಮಸೂದೆ ತಿದ್ದುಪಡಿ ವಿರೋಧಿಸಿ ಮುಸ್ಲಿಂರು ಕಪ್ಪು ಪಟ್ಟಿ ಧರಿಸಿ ಪ್ರಾರ್ಥನೆ ಸಲ್ಲಿಸಿದ ವಿಚಾರವಾಗಿ ಹಿಂದೂಪರ ಸಂಘಟನೆ ಮುಖಂಡ ಕಲ್ಲಡ್ಕ್ ಪ್ರಭಾಕರ್ ಮಾತನಾಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಸ್ಲಿಂ ಸಮಸ್ಯೆ ಎಂದಾಗ ಒಗ್ಗಟ್ಟಾಗಿ ಬಿಡುತ್ತಾರೆ. ಹಿಂದೂಗಳು ಸಮಸ್ಯೆ ಬಂದಾಗ ರಾಜಕೀಯ ಮಾಡಿಕೊಂಡು ಅವರವರ ಲಾಭವನ್ನಷ್ಟೆ ನೋಡುತ್ತಾರೆ. ಮಂಡ್ಯದಲ್ಲಿ ಹಿಂದೂಪರ ಸಂಘಟನೆ ಮುಖಂಡ ಕಲ್ಲಡ್ಕ ಪ್ರಭಾಕರ್ ಬೇಸರ ವ್ಯಕ್ತಪಡಿಸಿದ್ದಾರೆ.
ವಕ್ಫ್ ನಿಂದ ನಾವು ನಮ್ಮ ಭೂಮಿಯನ್ನೆಲ್ಲಾ ಕಳೆದುಳ್ಳುತ್ತೇವೆ. ಒಂದು ದಿನ ಈ ನಮ್ಮ ನೆಲ ಪಾಕಿಸ್ಥಾನವಾಗಲಿದೆ. ಹೀಗಾಗಿ ಹಿಂದೂ ಸಮಾಜ ಎಚ್ಚೆತ್ತುಕೊಳ್ಳಬೇಕಿದೆ. ರಾಜಕೀಯ ಕಾರಣಕ್ಕಾಗಿ ವಕ್ಫ್ ಮಸೂದೆ ತಿದ್ದುಪಡಿ ವಿರೋಧಿಸಲಾಗುತ್ತಿದೆ. ಈಗಾಗಲೇ ನಮ್ಮ ಭೂಮಿಯನ್ನು ಅಲ್ಲಾನಿಗೆ ಕೊಟ್ಟಿದ್ದೇವೆ. ಮುಸ್ಲಿಂರು ಇಲ್ಲಿ ಆಕ್ರಮಣಕಾರರಾಗಿ ಬಂದವ್ರು. ಮುಸ್ಲಿಂರು ಇಲ್ಲಿರಲು ನಮ್ಮ ಅಭ್ಯಂತರ ಇಲ್ಲಾ.
ಆದರೆ ನಮ್ಮ ಮೇಲೆ ಸವಾರಿ ಮಾಡುವ ಯೋಚನೆ ಮಾಡಬಾರದು ಅಷ್ಟೇ. ವಕ್ಪ್ ತಿದ್ದುಪಡಿ ಮಾಡುವ ಸಣ್ಣ ಪ್ರಯತ್ನವನ್ನು ಮೋದಿ ಮಾಡಿದ್ದಾರೆ. ಈ ದೇಶದಲ್ಲಿ ವಕ್ಫ್ ಕಾಯ್ದೆ ಇರಲೇ ಬಾರದು. ಮುಸ್ಲಿಂರು ನಮ್ಮೊಟ್ಟಿಗೆ ಬದುಕಲು ಅಭ್ಯಂತರ ಇಲ್ಲಾ. ಕ್ರೂರತೆ, ನಮ್ಮ ಹೆಣ್ಣು ಮಕ್ಕಳನ್ನು ಹೊತ್ಕೊಂಡ್ ಹೋಗದು ಇರಬಾರದು.