ರೌಡಿಶೀಟರ್ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವ ಮರ್ಡರ್ ಪ್ರಕರಣದ ಆರೋಪಿಗಳಿಗೆ ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿದೆ.
ಕೇಸ ಸಂಬಂಧ 16 ಆರೋಪಿಗಳನ್ನು ಅರೆಸ್ಟ್ ಮಾಡಿದ ಪೊಲೀಸರು ಕೋರ್ಟ್‌ಗೆ ಪ್ರಡ್ಯೂಸ್ ಮಾಡಿದ್ರು. ಕಿರಣ್, ವಿಮಲ್ ರಾಜ್, ಪ್ರದೀಪ್, ಮದನ್, ಸ್ಯಾಮುಯಲ್, ಅರುಣ್. ನವೀನ್ ಕುಮಾರ್, ನರಸಿಂಹ, ಮುರುಗೇಶ್, ಸುದರ್ಶನ್, ಅವಿನಾಶ್, ಶಿವ, ಮನೋಜ್, ಶಿವಪ್ರಸಾದ್, ಪ್ಯಾಟ್ರಿಕ್ ಸೇರಿದಂತೆ 16 ಆರೋಪಿಗಳಿಗೆ ಆಗಸ್ಟ್ 4ರವರೆಗೂ ನ್ಯಾಯಾಂಗ ಬಂಧನ ವಿಧಿಸಿ ಕೋರ್ಟ್ ಆದೇಶ ನೀಡಿದೆ. ಇನ್ನು ಬಿಕ್ಲು ಶಿವ ಹತ್ಯೆಗೈದು ಎಸ್ಕೇಪ್ ಆಗಿರುವ ಕಿಂಗ್‌ಪಿನ್ ಜಗದೀಶ್ ಅಲಿಯಾಸ್ ಜಗ್ಗ ಹಾಗೂ ಧನುಷ್‌ಗಾಗಿ ಪೊಲೀಸರು ಬಲೆ ಬೀಸಿದ್ದಾರೆ.


















