ಮುಂಬೈ, ಏಪ್ರಿಲ್ 12, 2025: ಆಫ್-ಸೀಸನ್ ಅಲ್ಟಿಮೇಟ್ (OSU) ವತಿಯಿಂದ ಆಯೋಜಿಸಲಾದ ರೆಫೆಕ್ಸ್ ಮುಂಬೈ ಅಲ್ಟಿಮೇಟ್ ಲೀಗ್ (MUL) 5ನೇ ಹಂತದ ಪಂದ್ಯಾವಳಿ ನಾಳೆಯಿಂದ ಪ್ರಾರಂಭವಾಗುತ್ತಿದೆ. ಡಿಫೆಂಡಿಂಗ್ ಚಾಂಪಿಯನ್ ಡಾನ್ಸಿಂಗ್ ಡ್ರಾಗನ್ಸ್ ವಿಂಗ್ಸ್ ಅರೆನಾದಲ್ಲಿ ಬುಂಬೈ ಬಂಟೈಸ್ ವಿರುದ್ಧ ಪಂದ್ಯ ನಡೆಯಲಿದೆ. ಮೊದಲ ದಿನವೇ ಎರಡು ಮೈದಾನಗಳಲ್ಲಿ ಆರು ಪಂದ್ಯಗಳು ನಡೆಯಲಿದ್ದು, ಪಂದ್ಯಗಳು ಸಂಜೆ 4 ಗಂಟೆ, 5:30 ಮತ್ತು 7 ಗಂಟೆಗೆ ನಡೆಯಲಿದೆ.
ಆಫ್ಟರ್ಬರ್ನರ್ಸ್ ತಂಡವು ಫೀಲ್ಡ್ 2ರಲ್ಲಿ ರೀಬಾರ್ನ್ ಫೈರ್ ತಂಡ ಹಾಗು ಎರಡನೇ ಪಂದ್ಯದಲ್ಲಿ ಬುಂಬೈ ಬಂಟೈಸ್ ತಂಡವನ್ನು ಎದುರಿಸಲಿದೆ. ಹೊಸ ತಂಡಗಳಾದ ಬಾಂಬೆ ರೈನೋಸ್ ಮತ್ತು ದೇಸಿ ಹಾಕ್ಸ್ ಮುಂಬೈ ಅಲ್ಟಿಮೆಟ್ ಲೀಗ್ ನಲ್ಲಿ ತಮ್ಮ ಚೊಚ್ಚಲ ಪ್ರದರ್ಶನ ನೀಡಲಿವೆ. ಈ ಪಂದ್ಯವು 40 ನಿಮಿಷಗಳ ಕಾಲ ನಡೆಯಲಿದೆ. ವಿಜಯ ತಂಡಕ್ಕೆ 3 ಅಂಕಗಳನ್ನು ಮತ್ತು ಟೈ ಆದ ಪಂದ್ಯವು 1 ಅಂಕ ಪಡೆಯುತ್ತದೆ.
ಲೀಗ್ ಪಂದ್ಯಾವಳಿಯ ಅಂತ್ಯದ ವೇಳೆಗೆ ಅಂಕಪಟ್ಟಿಯಲ್ಲಿ ಮೊದಲ ಎರಡು ಸ್ಥಾನಗಳಲ್ಲಿರುವ ತಂಡಗಳು ಫೈನಲ್ಗೆ ನೇರ ಪ್ರವೇಶಕ್ಕಾಗಿ ಕ್ವಾಲಿಫೈಯರ್ ನಲ್ಲಿ ಆಡಲಿದ್ದು, ಮೂರನೇ ಮತ್ತು ನಾಲ್ಕನೇ ಸ್ಥಾನದಲ್ಲಿರುವ ತಂಡಗಳು ಎಲಿಮಿನೇಟರ್ನಲ್ಲಿ ಆಡಲಿವೆ. ಅಂತಿಮವಾಗಿ, ಲೀಗ್ನ ಕೊನೆಗೆ 5ನೇ ಮತ್ತು 6ನೇ ಸ್ಥಾನಗಳನ್ನು ನಿರ್ಧರಿಸಲು ಒಂದು ಪ್ಲೇಸ್ಮೆಂಟ್ ಪಂದ್ಯವನ್ನೂ ಆಯೋಜಿಸಲಾಗುತ್ತದೆ.