ಬೆಂಗಳೂರು : ಟ್ರಾಫಿಕ್‌ನಿಂದ ಬೇಸತ್ತು, ರಾಜಕಾರಣಿಗಳ ವಿರುದ್ಧ ಬಹು ಭಾಷಾ ನಟಿ ಪ್ರಣೀತಾ ಸುಭಾಷ್ ಎಕ್ಸ್‌ನಲ್ಲಿ ಪೋಸ್ಟ್ ಹಾಕಿ ಬೇಸರ ವ್ಯಕ್ತಪಡಿಸಿದ್ದಾರೆ.

ಕೋರಮಂಗಲ ಭಾಗದಲ್ಲಿ ಇಂದು ಜರ್ಮನಿ ಚಾನ್ಸಿಲರ್ ಭೇಟಿ ಹಿನ್ನೆಲೆ, ರಸ್ತೆ ಮಾರ್ಗಗಳ ಬಂದ್ ಮಾಡಲಾಗಿತ್ತು. ಮಾರ್ಗ ಬಂದ್ ಮಾಡಿದ್ದಕ್ಕಾಗಿ ಇತರೆ ವಾಹನ ಸವಾರರಿಗೆ ಟ್ರಾಫಿಕ್ ಬಿಸಿ ತಟ್ಟಿತ್ತು. ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಹಾಕಿ ನಟಿ ಪ್ರಣೀತಾ, ಇದು ತುಂಬಾ ಬೇಸರದ ಸಂಗತಿ. ಕೋರಮಂಗಲಕ್ಕೆ ಹೋಗುವ ರಸ್ತೆಗಳು ಮುಚ್ಚಿ ಹೋಗಿರುವುದರಿಂದ ನಾಗರಿಕರಿಗೆ ಬಹಳಷ್ಟು ಸಮಸ್ಯೆ ಉಂಟಾಗಿದೆ. ಇದು ಕೇವಲ ಕೆಲವು ರಾಜಕಾರಣಿಗಳ, ವಿಐಪಿ ಸಂಚಾರದ ಕಾರಣಕ್ಕಾಗಿ ಇಂತಹ ನಡೆ ಒಳ್ಳೆಯದಲ್ಲ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಈ ಟ್ರಾಫಿಕ್‌ನಿಂದ ಎಲ್ಲಿಗೂ ಹೋಗಲು ಸಾಧ್ಯವಾಗದಂತೆ ಆಗಿದೆ. ರಾಜಕಾರಣಿಗಳು ಮತ್ತು ಅವರ ವಿಐಪಿ ಜೀವನವು ಅಲ್ಲಿಯೇ ಇರುವುದು ಹೆಚ್ಚಿನ ಸಮಸ್ಯೆಗಳನ್ನು ಉಂಟುಮಾಡುತ್ತಿದೆ. ಇಂತಹ ನಡೆ ದೇಶದ ಬೆಳವಣಿಗೆಗೆ ಸಹಾಯ ಮಾಡಲು ಅಲ್ಲ ಎಂದು ಬೇಸರದ ಪೋಸ್ಟ್ ಹಾಕಿದ್ದಾರೆ.
ಇದನ್ನೂ ಓದಿ : ನಂಬರ್ ಪ್ಲೇಟ್ ಇಲ್ಲದೇ ವಿಲೀಂಗ್ | ಹೆದ್ದಾರಿಯಲ್ಲಿ ಪುಂಡರ ದಾಂಧಲೆ



















