ಖ್ಯಾತ ಬಹುಭಾಷಾ ನಟ ಶೈನ್ ಟಾಮ್ ಚಾಕೋ ಕಾರು ಅಪಘಾತವಾಗಿದ್ದು, ಅವರ ತಂದೆ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.

ತಮಿಳುನಾಡಿನ ಧರ್ಮಪುರಿ ಬಳಿ ಕಾರು ಅಪಘಾತ ಸಂಭವಿಸಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಶೈನ್ ಚಾಕೋ ಹಾಗೂ ಕುಟುಂಬವು ತಂದೆಯ ಚಿಕಿತ್ಸೆಗಾಗಿ ಬೆಂಗಳೂರಿಗೆ ಆಗಮಿಸುತ್ತಿತ್ತು. ಈ ವೇಳೆ ಬೆಂಗಳೂರು- ಸೇಲಂ ರಾಷ್ಟ್ರೀಯ ಹೆದ್ದಾರಿಯ ಧರ್ಮಪುರಿ ಪಾಲಕೋಡು ಬಳಿ ಅಪಘಾತ ಸಂಭವಿಸಿದೆ.

ಸರಕು ಸಾಗಾಟ ಟ್ರಕ್ ಗೆ ಹಿಂಬಂದಿಯಿಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಧರ್ಮಪುರಿ ಸರ್ಕಾರಿ ಆಸ್ಪತ್ರೆಗೆ ಶೈನ್ ಟಾಮ್ ಚಾಲೋ ಹಾಗೂ ತಾಯಿಯನ್ನು ದಾಖಲಿಸಿದ್ದಾರೆ. ವೈದ್ಯರು ತೀವ್ರ ನಿಗಾ ವಹಿಸಿದ್ದಾರೆ. ಇಂದು ಬೆಳಗ್ಗೆ 10 ಗಂಟೆ ವೇಳೆಗೆ ಈ ದುರ್ಘಟನೆ ಸಂಭವಿಸಿದೆ. ಶೈನ್ ಟಾಮ್ ಚಾಕೋ ಮಲಯಾಳಂನಲ್ಲಿ ಡಾಕು ಮಹರಾಜ್, ದಸರಾ, ರಾಬಿನ್ ಹುಡ್, ಬೀಸ್ಟ್ ಸೇರಿದಂತೆ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ.